ದಾಂಡೇಲಿ :ದಾಂಡೇಲಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಫಿರೋಜ್ ಫಿರ್ಜಾದೆ ಮನವಿ

ದಾಂಡೇಲಿ : ನಗರದಲ್ಲಿ ಕೆಲವೊಂದು ಬಹುಮುಖ್ಯ ಸಮಸ್ಯೆಗಳಿದ್ದು, ಆ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಸಕರಾದ ಆರ್.ವಿ.ದೇಶಪಾಂಡೆಯವರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯ ರಾಜ್ಯ ನಿರ್ದೇಶಕರಾದ ಫಿರೋಜ್ ಫಿರ್ಜಾದೆಯವರು ಇಂದು ಶುಕ್ರವಾರ ನಗರದಲ್ಲಿ ಮಾಧ್ಯಮದ ಮೂಲಕ ಶಾಸಕ ಆರ್.ವಿ.ದೇಶಪಾಂಡೆಯವರಿಗೆ ಮನವಿ ಮಾಡಿದ್ದಾರೆ.

ಬಹುಮುಖ್ಯವಾಗಿ ಬೆಳೆಯುತ್ತಿರುವ ದಾಂಡೇಲಿಗೆ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸಬೇಕು. ಸ್ಥಗಿತಗೊಂಡಿರುವ ದಾಂಡೇಲಿ-ಅಳ್ನಾವರ ಪ್ಯಾಸೆಂಜರ್ ರೈಲು ಪುನರಾರಂಭಿಸಬೇಕು. ನಗರದಲ್ಲಿ ನಗರ ಸಭೆಯ ಅಧೀನದಲ್ಲಿರುವ ಸಾವಿರಾರು ಮನೆಗಳನ್ನು ಅಕ್ರಮ-ಸಕ್ರಮ ಯೋಜನೆಯಡಿ ಅವರವರ ಹೆಸರಿನ ಮಾಲೀಕತ್ವಕ್ಕೆ ಮಾಡಿಕೊಡಬೇಕು. ಮುಚ್ಚಲ್ಪಟ್ಟ ಐಪಿಎಂ ಮತ್ತು ಡಿ.ಎಫ್.ಎ ಕಾರ್ಖಾನೆ ಪ್ರದೇಶದಲ್ಲಿ ಪರ್ಯಾಯ ಕಾರ್ಖಾನೆ ನಿರ್ಮಾಣಕ್ಕೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಫಿರೋಜ್ ಫಿರ್ಜಾದೆಯವರು ಆರ್.ವಿ.ದೇಶಪಾಂಡೆಯವರಿಗೆ ಮನವಿ ಮಾಡಿದ್ದಾರೆ.