ಸಿದ್ದಾಪುರ ( ಉತ್ತರ ಕನ್ನಡ ) : ಶಿಥಿಲಗೊಂಡ ನಡಿಮನೆ ಸೇತುವೆ, ಸ್ಥಳೀಯರಿಂದ ದುರಸ್ಥಿ ಕಾರ್ಯ.

ಸಿದ್ದಾಪುರ : ನಡಿಮನೆ ಕ್ರಾಸ್ ಸಮೀಪವಿರುವ ಸೇತುವೆಯು ಶಿಥಿಲಗೊಂಡಿದ್ದು ಸ್ಥಳೀಯ ಸಾರ್ವಜನಿಕರು ಶ್ರಮಧಾನದ ಮೂಲಕ ಸೇತುವೆ ದುರಸ್ತಿ ಕಾರ್ಯ ಮಾಡುತ್ತಿರುವ ದೃಶ್ಯವೂ ಕಂಡು ಬಂದಿದೆ
ಅಘನಾಷಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕಿರಿದಾದ ಸೇತುವೆಯನ್ನು ಬಹಳ ಹಿಂದೆ ನಿರ್ಮಾಣಮಾಡಲಾಗಿತ್ತು ಮಳೆಗಾಲದ ಸಂದರ್ಭದಲ್ಲಿ ಈ ನದಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಸೇತುವೆಯು ನೀರಿನ ರಭಸಕ್ಕೆ ಸಿಲುಕಿ ಶಿಥಿಲಗೊಂಡಿದ್ದು ಸೇತುವೆ ಮುರಿದು ಬೀಳುವ ಹಂತಕ್ಕೆ ತಲುಪಿದೆ ಈ ಸ್ಥಿತಿಯ ಬಗ್ಗೆ ಹಿಂದಿನ ಶಾಸಕ ಕಾಗೇರಿಅವರಿಗೆ ಹಲವಾರು ಬಾರಿ ತಿಳಿಸಿದರು ಕೂಡ ಯಾವುದೇ ರೀತಿ ಪ್ರಯೋಜನ ವಾಗದೆ ಜನರ ಬೇಡಿಕೆ ಯಂತೆ ನೂತನ ಸೇತುವೆ ನಿರ್ಮಾಣ ಮಾಡದೆ ಇರುವುದು ಇಂದು ಈ ಸ್ಥಿತಿಗೆ ಬರಲು ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ
ಮಳೆಗಾಲ ಸಮೀಪಸುತ್ತಿದ್ದು ಸ್ಥಳೀಯರೆ ದುರಸ್ಥಿ ಮಾಡಿಕೊಳ್ಳುತ್ತಿದ್ದೇವೆ ಈ ಸೇತುವೆ ಅಂಬೇಗಾರ್, ನಡಿಮನೆ, ತಂಗುಂಡಿ ಮೂಲಕ ನೆಬ್ಬುರ್ ಕ್ರಾಸ್ ಗೆ ಸಂಪರ್ಕ ಕಲ್ಪಿಸಿದೆ
ದಿನನಿತ್ಯ ನೂರಾರು ವಿದ್ಯಾರ್ಥಿಗಳು, ರೈತರು ಸಾರ್ವಜನಿಕರು ಓಡಾಟಕ್ಕೆ ಈ ಸೇತುವೆಯನ್ನ ಬಳಸಬೇಕಾದ ಅನಿವಾರ್ಯವಿದೆ ಹಾಗಾಗಿ ನೂತನ ಶಾಸಕರು ಮುಂದಿನ ದಿನದಲ್ಲಿ ದೊಡ್ಡ ಸೇತುವೆ ನಿರ್ಮಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ