ಭಟ್ಕಳ: ಗದ್ದೆ ಕೆಲಸ ಮುಗಿಸಿ ಹಾಲು ಕೊಡಲು ರೈಲ್ವೆ ಹಳಿ ದಾಟುತಿದ್ದ ಮಹಿಳೆಯೋರ್ವಳಿಗೆ ರೈಲು ಬಡಿದು ಸಾವನ್ನಪ್ಪಿರುವ ಘಟನೆ ಯಲ್ವಡಿಕೌವರ ಪಂಚಾಯತ ವ್ಯಾಪ್ತಿಯ ಕೊಂಕಣ ರೈಲ್ವೆ ಹಳಿ ಸಮೀಪ ನಡೆದಿದೆ.
ಈರಮ್ಮ ಮಂಜಯ್ಯ ನಾಯ್ಕ ಮೃತ ಮಹಿಳೆ ಎಂದು ತಿಳಿದು ಬಂದಿದೆ. ಈಕೆ ಬೆಳ್ಳಿಗ್ಗೆ ಗದ್ದೆ ಕೆಲಸ ಮುಗಿಸಿಕೊಂಡು ಹಾಲನ್ನು ಕೊಡಲು ಯಲ್ವಡಿಕೌವರ ಪಂಚಾಯತ ವ್ಯಾಪ್ತಿಯ ಕೊಂಕಣ ರೈಲ್ವೆ ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.