ಬೆಂಗಳೂರು: ಮಂಗಳವಾರ ಕೇತುಗ್ರಸ್ತ ಖಂಡಗ್ರಾಸ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ದೇವಸ್ಥಾನಗಳು ಎಷ್ಟು ಗಂಟೆಗೆ ತೆರೆಯಲಿವೆ.? ಸೂರ್ಯಗ್ರಹಣ ಇರುವುದರಿಂದ ಯಾವೆಲ್ಲಾ ಪೂಜೆಗಳು ನಡೆಯಲಿವೆ ಎನ್ನುವ ವಿವರ ಈ ರೀತಿ ಇದೆ.
ಕಾಡುಮಲ್ಲೇಶ್ವರ ದೇವಸ್ಥಾನ – ಮಲ್ಲೇಶ್ವರಂ
- ಸೂರ್ಯಗ್ರಹಣ ನಿಮಿತ್ತ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ದೇವಸ್ಥಾನ ಓಪನ್ ಇರಲಿದೆ.
- ಬೆಳಿಗ್ಗೆ 10 ಗಂಟೆಯಿಂದ ಸೂರ್ಯಗ್ರಹಣ ಮುಗಿಯುವ ತನಕ ದೇವಸ್ಥಾನ ಕ್ಲೋಸ್
- ಶಿವನಿಗೆ ದರ್ಬಾಬಂಧನ ಮಾಡಿ ದೇವಸ್ಥಾನ ಕ್ಲೋಸ್ ಮಾಡಲಿರುವ ಅರ್ಚಕರು
- ಸೂರ್ಯ ಗ್ರಹಣದ ನಂತರ ಸಂಜೆ 6 ಗಂಟೆಯಿಂದ ದೇವಸ್ಥಾನದ ಶುದ್ದಿ ಕಾರ್ಯ ಆರಂಭ
- ಸಂಜೆ 7 ಗಂಟೆಗೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ
ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ – ಮಲ್ಲೇಶ್ವರಂ
- ಗ್ರಹಣದ ಪ್ರಯುಕ್ತ ಬೆಳಿಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ ಶುರು
- ಬೆಳಿಗ್ಗೆ 8 ಗಂಟೆಗೆ ಲಕ್ಷ್ಮೀ ನರಸಿಂಹ ಸ್ವಾಮಿ ದೇವರ ಮಹಾಮಂಗಳಾರತಿ
- ಬೆಳಿಗ್ಗೆ 10 ಗಂಟೆ ದೇವಸ್ಥಾನ ಕ್ಲೋಸ್
- ಸಂಜೆ ಗ್ರಹಣದ ನಂತರ ಸ್ವಚ್ಚತಾ ಕಾರ್ಯ ಆರಂಭ
- 7.30 ಕ್ಕೆ ಭಕ್ತಾಧಿಗಳಿಗೆ ದರ್ಶನಕ್ಕೆ ಅನುವು
- ಗ್ರಹಣ ಮುಗಿದ ನಂತರ 26 ರಂದು ಗ್ರಹಣ ನಿಮಿತ್ತ ಬೆಳಿಗ್ಗೆ 10 ಗಂಟೆಗೆ ಗ್ರಹಣ ಶಾಂತಿ ಹೋಮ
ಗವಿಗಂಗಾದರ ದೇವಸ್ಥಾನ – ಚಾಮರಾಜಪೇಟೆ
- ಬೆಳಿಗ್ಗೆ 6 ಗಂಟೆ ದೇವಸ್ಥಾನ ಓಪನ್
- 8 ಗಂಟೆಯವರೆಗೆ ಭಕ್ತಾಧಿಗಳಿಗೆ ದೇವರ ದರ್ಶನ
- 8 ಕ್ಕೆ ದರ್ಬಾಬಂಧನ ಮಾಡಿ ದೇವಸ್ಥಾನ ಕ್ಲೋಸ್
- ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ದೋಷವಿರುವ ನಕ್ಷತ್ರದವರಿಗೆ ದೋಷ ಪರಿಹಾರ ಹೋಮ
- ಗ್ರಹಣ ಮೋಕ್ಷಕಾಲದ 6.45 ನಂತರ ದೇವಸ್ಥಾನ ಸ್ವಚ್ಚತಾ ಕಾರ್ಯ ಆರಂಭ
- ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರಗೆ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ
ಬಂಡಿ ಮಹಾಕಾಳಿ ದೇವಸ್ಥಾನ – ಚಾಮರಾಜಪೇಟೆ
- ಅಮಾವಾಸ್ಯೆ ದಿನ ಓಪನ್ ಇರುವ ಏಕೈಕ ದೇವಸ್ಥಾನ ಬಂಡಿ ಮಹಾಕಾಳಿ ದೇವಸ್ಥಾನ
- ಎಂದಿನಂತೆ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 10 ರವರೆಗೆ ದೇವಸ್ಥಾನ ಓಪನ್
- ಮಧ್ಯಾಹ್ನ 2 ಗಂಟೆಯ ನಂತರ ನವಗ್ರಹ ಹೋಮ, ಚಂಡಿಹೋಮ
- ಗ್ರಹಣದ ನಂತರ ದೇವಸ್ಥಾನ ಹಾಗೂ ದೇವರಿಗೆ ದರ್ಬೆಯಿಂದ ನೀರು ಪ್ರೋಕ್ಷಣೆ
- ಹೋಮದ ನಂತರ ದೇವರಿಗೆ ಕಳಷಾಭಿಷೇಕ
- ಪಂಚಾಮೃತಾಭಿಷೇಕದ ನಂತ್ರ ದೇವರ ದರ್ಶನಕ್ಕೆ ಅನುವು
- ದೇವಿಯ ದರ್ಶನಕ್ಕೆ ಬಂದ ಭಕ್ತಾಧಿಗಳಿಗೆ ಅಭಿಷೇಕದ ನೀರಿನ ಪ್ರೋಕ್ಷಣೆ
ಗಾಳಿ ಆಂಜನೇಯ ದೇವಸ್ಥಾನ – ಮೈಸೂರು ರಸ್ತೆ
- ಬೆಳಿಗ್ಗೆ 6 ಗಂಟೆಗೆ ದೇವಸ್ಥಾನ ಓಪನ್
- ಮಧ್ಯಾಹ್ನ 12 ಗಂಟೆಗೆ ದೇವಸ್ಥಾನ ಕ್ಲೋಸ್
- ಸಂಜೆ 6 ಗಂಟೆಯ ನಂತ್ರ ದೇವಸ್ಥಾನ ಶುದ್ದಿಕಾರ್ಯ ಆರಂಭ
- ಸಂಜೆ 7 ಗಂಟೆ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅನುವು
ಬನಶಂಕರಿ ಅಮ್ಮನವರ ದೇವಸ್ಥಾನ – ಬನಶಂಕರಿ
- ಬೆಳಿಗ್ಗೆ ಎಂದಿನಂತೆ ದೇವಸ್ಥಾನದಲ್ಲಿ ಪೂಜಾ ಕಾರ್ಯ ಆರಂಭ
- ಬೆಳಿಗ್ಗೆ 10 ಗಂಟೆಗೆ ದೇವಸ್ಥಾನ ಕ್ಲೋಸ್
- ಗ್ರಹಣ ನಿಮಿತ್ತ ದೇವಸ್ಥಾನದಲ್ಲಿ ಅನ್ನದಾಸೋಹ ಇಲ್ಲ
- ಗ್ರಹಣ ಮುಗಿದ ನಂತರ ದೇವಸ್ಥಾನ ಶುದ್ದಿಕಾರ್ಯ ಆರಂಭ
- ಸಂಜೆ 7.30 ರ ನಂತರ ದೇವರ ದರ್ಶನಕ್ಕ ಅನುವು