ಕಾರ್ಗಿಲ್: ಪ್ರಧಾನಿ ನರೇಂದ್ರ ಮೋದಿ ಈ ಬಾರಿಯೂ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಸೈನಿಕರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಲು ಸೋಮವಾರ ಕಾರ್ಗಿಲ್‌ಗೆ ಬಂದಿಳಿದ ಅವರು ದೀಪಾವಳಿ ಎಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ ಎಂದು ಹೇಳಿದರು.
ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ನೀವೆಲ್ಲರೂ ನನ್ನ ಕುಟುಂಬವಾಗಿದ್ದೀರಿ. ಕಾರ್ಗಿಲ್‌ನಲ್ಲಿ ನಮ್ಮ ವೀರ ಯೋಧರೊಂದಿಗೆ ದೀಪಾವಳಿಯನ್ನು ಕಳೆಯುವುದು ಒಂದು ಸೌಭಾಗ್ಯ’ ಎಂದು ಹೇಳಿದರು. ಇದೇ ವೇಳೆ ಸೈನಿಕರೊಂದಿಗೆ ʻವಂದೇ ಮಾತರಂʼ ಹಾಡು ಹಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರತಿ ದೀಪಾವಳಿಯಂದು ದೇಶದ ಗಡಿಯಲ್ಲಿ ನಿಯೋಜನೆಗೊಂಡಿರುವ ಸೈನಿಕರನ್ನು ಭೇಟಿ ಮಾಡುವ ಪ್ರಧಾನಿ ಈ ಬಾರಿ ಕಾರ್ಗಿಲ್‌ನಲ್ಲಿದ್ದಾರೆ.



