ಮಧ್ಯಪ್ರದೇಶ: ತಂಬಾಕು ತರಲು ಒಪ್ಪದ 8 ವರ್ಷದ ಮೊಮ್ಮಗಳನ್ನು ಅಜ್ಜನೇ ಕೊಂದ ಘಟನೆ ಮಗುನಾ ಜಿಲ್ಲೆಯ ಚತರ್ಪುರ ಗ್ರಾಮದಲ್ಲಿ ನಡೆದಿದೆ. ಮುನ್ನಾ ಸಹರಿಯಾ (60) ಆರೋಪಿ ಅಜ್ಜ.
ಆರೋಪಿ ಅಂಗಡಿಯಿಂದ ತಂಬಾಕು ತರಲು ಹೇಳಿದರೂ ಬಾಲಕಿ ನಿರಾಕರಿಸಿದ್ದಕ್ಕೆ ಕೋಪಗೊಂಡು ಆಕೆಯನ್ನು ಕೊಂದು ಶವವನ್ನು ಮೇವಿನ ರಾಶಿಯಲ್ಲಿ ಹೂತು ಹಾಕಿದ್ದಾನೆ. ಈತ ಮೃತ ಬಾಲಕಿಯ ಅಜ್ಜನ ಸೋದರ ಸಂಬಂಧಿ ಎಂದು ವರದಿಗಳು ತಿಳಿಸಿವೆ. ತಂಬಾಕು ತರಲು ನಿರಾಕರಿಸಿದ್ದಕ್ಕಾಗಿ ಆರೋಪಿ ಕುಪಿತಗೊಂಡು ಕೊಡಲಿಯಿಂದ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ತಂದೆ ತಾಯಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಪೋಷಕರು ಮನೆಯಲ್ಲಿಲ್ಲದಿದ್ದಾಗ ಈ ಘಟನೆ ನಡೆದಿದೆ. ಆರೋಪಿ ಸಹಾರಿಯಾನನ್ನು ಪೊಲೀಸರು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.