ಭಟ್ಕಳ: ಕಾಂಗ್ರೆಸ್ ನವರು ಅಂದು ಭಾರತವನ್ನು ತುಂಡರಿಸಿ ಇಂದು ಜೋಡೊ ಹೆಸರಿನಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅವರು ಕಡವಿನಕಟ್ಟಾ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕಾಶ್ಮೀರದಲ್ಲಿ ಪ್ರತ್ಯೇಕ ಧ್ವಜ ಹಾರಾಡುತಿದ್ದವು. ಮೋದಿ ಅಧಿಕಾರಕ್ಕೆ ಬಂದ ಮೇಲೆ ಆರ್ಟಿಕಲ್ 370 ಅನ್ನು ರದ್ದು ಪಡಿಸಿ ಕಾಶ್ಮೀರದ ಪ್ರತಿ ಸರ್ಕಾರಿ ಕಚೇರಿಯ ಮೇಲೆ ತ್ರೀವರ್ಣ ಧ್ವಜ ಹಾರುವ ಹಾಗೆ ಮಾಡಿರುವುದು ನಮಗೆ ಹೆಮ್ಮೆ. ವಿರೋಧಿಗಳ ಟೀಕೆ ಟಿಪ್ಪಣಿಗಳಿಗೆ ಬಿಜೆಪಿಗರು ಹೆದರುವ ಅವಶ್ಯಕತೆ ಇಲ್ಲ. ಅವರ ಪ್ರಶ್ನೆಗೆ ಉತ್ತರಿಸುವ ಸಾಮರ್ಥ್ಯ ನಾವು ಹೊಂದಿರಬೇಕು. ದೇಶದಲ್ಲಿ ಬುದ್ದಿಜೀವಿಗಳು, ಪ್ರಗತಿಪರರು ಎದ್ದು ನಿಂತಾಗ ರಾಜನಾದವನು ಎಡವದೆ ಉತ್ತಮ ಆಡಳಿತ ನಡೆಸಲು ಸಾಧ್ಯವಾಗುತ್ತದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನೇಕ ಜನಪರ ಯೋಜನೆಗಳು ಸಾಮಾನ್ಯ ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಕಾರ್ಯಕರ್ತರು ಮಾಡಬೇಕು. ಎಸ್.ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಎಸ್.ಸಿ.ಎಸ್ಟಿ ಫಲಾನುಭವಿಗಳಿಗೆ ಉಚಿತ 75 ಯೂನಿಟ್ ವಿದ್ಯುತ್ ನೀಡಲಾಗುತ್ತಿದೆ. ರಾಜ್ಯದ ಅಂದಾಜು 24 ಲಕ್ಷ ಬಿಪಿಎಲ್ ಕುಟುಂಬದಾರರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಹಿಂದುಳಿದ ವರ್ಗ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನಾಮಧಾರಿ ಸಮಾಜಕ್ಕೆ ವಿರೋಧ ಪಕ್ಷದವರು ನಾಮ ಹಾಕಿದ್ದು ಬಿಟ್ಟರೆ ಬೇರೆ ಎನೂ ಮಾಡಿಲ್ಲ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾರಾಯಣ ಗುರು ಹೆಸರಿನಲ್ಲಿ ವಸತಿ ಶಾಲೆ ತೆರೆಯುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದೆ ಎಂದರು.
ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ ಬಿಜಪಿ ಪಕ್ಷದ ಕಾರ್ಯಕರ್ತರು ವಂಶಪರAಪರೆ, ಪುಷ್ಟಿ ರಾಜಕಾರಣ ಮಾಡದೇ ಪಕ್ಷಕ್ಕೆ ಸಿದ್ದಾಂತಕ್ಕೆ ಬದ್ದರಾಗಿ ಕೆಲಸ ಮಾಡುತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ ಜೀ, ಕಾರವಾರ ಶಾಸಕಿ ರೂಪಾಲಿ ನಾಯ್ಕ, ಭಟ್ಕಳ ಶಾಸಕ ಸುನೀಲ್ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ್ ಹೆಗಡೆ, ಸಂಗನಾ ಗಣೇಶ ರಾವ್, ಕೆ.ಜಿ. ನಾಯ್ಕ, ಪ್ರಸನ್ನ ಕರ್ಕರೆ, ಆರ್.ಡಿ ಹೆಗಡೆ ಹಾಗೂ ಮತ್ತಿತರು ಉಪಸ್ಥಿತರಿದ್ದರು.