ಗುಜರಾತ್: ರಾಜಧಾನಿ ಗಾಂಧಿನಗರದಲ್ಲಿ ಆಯೋಜಿಸಲಾಗಿರುವ DefExpo-2022 ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತೀಯ ರಕ್ಷಣಾ ವಲಯಕ್ಕೆ ಬಲ ನೀಡುವ ಹಿನ್ನೆಲೆಯಲ್ಲಿ ರಕ್ಷಣಾ ಪ್ರದರ್ಶನವನ್ನು ನಡೆಸಲಾಗುತ್ತಿದೆ.
‘ಹೆಮ್ಮೆಯ ಹಾದಿ’ ಆಶಯದಲ್ಲಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ಮೋದಿ ಇಂಡಿಯಾ ಪೆವಿಲಿಯನ್‌ನಲ್ಲಿ ದೇಶಿ ತರಬೇತುದಾರ ಏರ್‌ಕ್ರಾಫ್ಟ್ ಎಚ್‌ಟಿಟಿ-40 ಅನಾವರಣಗೊಳಿಸಿದರು. ಈ ವಿಮಾನವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಈ ಏರ್‌ಕ್ರಾಫ್ಟ್ ಸ್ವದೇಶಿ ನಿರ್ಮಿತ ವ್ಯವಸ್ಥೆಯನ್ನು ಹೊಂದಿದ್ದಲ್ಲದೇ ಪೈಲಟ್ ಫ್ರೆಂಡ್ಲಿ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಇದೇ ವೇಳೆ ಪ್ರಧಾನಿ ಮೋದಿ ‘ಮಿಷನ್ ಡಿಫ್ಸ್ಪೇಸ್’ ಪ್ರದರ್ಶನಕ್ಕೂ ಚಾಲನೆ ನೀಡಿದರು. ಭಾರತೀಯ ಸ್ಟಾರ್ಟ್‌ಅಪ್ ಗಳು, ಕೈಗಾರಿಕೆಗಳು ಬಾಹ್ಯಾಕಾಶದಲ್ಲಿ ರಕ್ಷಣಾ ಪಡೆಗಳಿಗೆ ಅನುಕೂಲವಾಗುವ ಆವಿಷ್ಕಾರಗಳನ್ನು ಈ ಪ್ರದರ್ಶನ ಒಳಗೊಂಡಿದೆ.