ಬೆಂಗಳೂರು: ಪಿಎಫ್ಐ ಸಂಘಟನೆ ಬ್ಯಾನ್ ಬಳಿಕ ರಾಜ್ಯದ ಮದರಸಾಗಳ ಮೇಲೂ ರಾಜ್ಯ ಸರ್ಕಾರ ಕಣ್ಣಿಟ್ಟಿದೆ. ರಾಜ್ಯದಲ್ಲಿ ಇರುವ 960 ಮದರಸಾಗಳ ಚಟುವಟಿಕೆ ಕುರಿತು ಅಧ್ಯಯನ ನಡೆಸಲು ಮುಂದಾಗಿದ್ದು ಮದರಸಾ ಬ್ಯಾನ್ ಗೆ ಒತ್ತಾಯದ ಬೆನ್ನಲ್ಲೇ ಶಿಕ್ಷಣ ಇಲಾಖೆ ಅಧ್ಯಯನಕ್ಕೆ ಮುಂದಾಗಿದೆ.
ಮದರಸಾಗಳಲ್ಲಿ ಉಗ್ರ ಚಟುವಟಿಕೆ ಆರೋಪದ ಬಳಿಕ ಸರ್ಕಾರ ಅಲರ್ಟ್ ಆಗಿದೆ. ಮದರಸಾಗಳನ್ನು ಬ್ಯಾನ್ ಮಾಡುವಂತೆ ಶಿಕ್ಷಣ ಇಲಾಖೆಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯದ ಮದರಸಾಗಳ ಚಟುವಟಿಕೆ ಅಧ್ಯಯನಕ್ಕೆ ಸಮಿತಿ ರಚನೆ ಮಾಡಿದೆ. ಶಿಕ್ಷಣ ಇಲಾಖೆಯ ಕಮಿಷನರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು ಮದರಸಾಗಳ ಕಂಪ್ಲೀಟ್ ಚಟುವಟಿಕೆ ಕುರಿತು ಸಮಿತಿ ವರದಿ ನೀಡಲಿದೆ. ವರದಿ ಬಳಿಕ ಮದರಸಾಗಳ ಬ್ಯಾನ್ ಮಾಡಬೇಕಾ ಅಥವಾ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡಿಸಬೇಕಾ ಎನ್ನುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ.