ಇಟಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಲಪಂಥೀಯ ಪಕ್ಷ: ಜಾರ್ಜಿಯಾ ಮೆಲೋನಿ ಮೊದಲ ಮಹಿಳಾ ಪ್ರಧಾನಿ: ಅಭಿನಂದನೆ ಸಲ್ಲಿಸಿದ ಪಿಎಂ ಮೋದಿ

ರೋಮ್: ಇಟಲಿಯ ಮೊದಲ ಮಹಿಳಾ ಪ್ರಧಾನಿಯಾಗಿ ಜಾರ್ಜಿಯಾ ಮೆಲೋನಿ ಜಯಭೇರಿ ಬಾರಿಸಿದ್ದಾರೆ. ಈ ಬಾರಿ ರಾಷ್ಟ್ರೀಯವಾದಿ ಬ್ರದರ್ಸ್ ಆಫ್ ಇಟಲಿ ಪಕ್ಷ ಶೇಕಡಾ 26 ರಷ್ಟು ಮತಗಳನ್ನು ಗಳಿಸುವುದರೊಂದಿಗೆ ದೊಡ್ಡ ಗೆಲುವು ಸಾಧಿಸಿದೆ. ಈ ಮೂಲಕ ಬಲಪಂಥೀಯ ಒಕ್ಕೂಟವು ಹೊಸ ಸಂಸತ್ತನ್ನು ರಚಿಸಲು ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದೆ.

ಇನ್ನು ಪ್ರಧಾನಿ ನರೆಂದ್ರ ಮೋದಿ ಜಾರ್ಜಿಯಾ ಮೆಲೋನಿ ಅವರನ್ನು ಅಭಿನಂದಿಸಿದ್ದಾರೆ. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಇಟಲಿಯ ಸಾರ್ವತ್ರಿಕ ಚುನಾವಣೆಯಲ್ಲಿ ನಿಮ್ಮ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ್ದಕ್ಕಾಗಿ ಅಭಿನಂದನೆಗಳು. ನಮ್ಮ ಸಂಬಂಧಗಳನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಜುಲೈನಲ್ಲಿ ಪ್ರಧಾನಿ ಮಾರಿಯೋ ಡ್ರಾಘಿ ಅವರ ರಾಷ್ಟ್ರೀಯ ಏಕತಾ ಸರ್ಕಾರ ಉರುಳಿದ ನಂತರ ಇಟಲಿಯ ಜನ ಬಲಪಂಥೀಯ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.