ಜೈಶಂಕರ್ ಪ್ರಶ್ನೆಗೆ ತಿರುಗೇಟು ನೀಡಿದ ಯುಎಸ್: ಹೇಳಿದ್ದೇನು.?!

ನವದೆಹಲಿ: ಇಸ್ಲಾಮಾಬಾದ್‌ಗೆ ಅಮೆರಿಕನ್ F-16 ಭದ್ರತಾ ಸಹಾಯದ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪ್ರಶ್ನೆ ಮಾಡಿದ್ದರು. ಇದರ ಬೆನ್ನಲ್ಲೇ ಯುಎಸ್​​​ ಪ್ರೆಸಿಡೆಂಟ್ ಜೋ ಬೈಡೆನ್​ ಸರ್ಕಾರ, ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಅಮೇರಿಕಾದ ಪಾಲುದಾರರೇ ಎನ್ನುವ ಮೂಲಕ ಜೈಶಂಕರ್​​ಗೆ ತಿರುಗೇಟು ನೀಡಿ ಪತ್ರಿಕಾ ಹೇಳಿಕೆಯೊಂದನ್ನು ಹೊರಡಿಸಿದೆ.

ಸಚಿವ ಜೈಶಂಕರ್ ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದ ಅಮೇರಿಕಾ ವಿರುದ್ಧ ಅಮೆರಿಕದ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದ ವೇಳೆ ಕೆಂಡಕಾರಿದ್ದರು. F-16 ಫೈಟರ್ ಜೆಟ್‌ಗಳನ್ನು ಯಾರ ವಿರುದ್ಧ ಬಳಸುತ್ತಾರೆ ಎಂದು ಗೊತ್ತಿದೆ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ​ ಮಾಡಿರುವ ಜೋ ಬೈಡೆನ್​​ ಸರ್ಕಾರ, ಭಾರತ, ಪಾಕ್​​ ನಮ್ಮ ಪಾಲುದಾರರು. ನಾವು ಯಾರೊಂದಿಗೂ ಸಂಬಂಧ ಬೆಳೆಸೋದಿಲ್ಲ ಎಂದು ಹೇಳಿದೆ. ನಾವು ಪಾಕ್​ ಹಾಗೂ ಭಾರತದೊಂದಿಗೆ ಭಿನ್ನ ವಿಚಾರಗಳಿಗಾಗಿ ಒಪ್ಪಂದ ಮಾಡಿಕೊಂಡು ವ್ಯವಹಾರ ಮಾಡಲಾಗುತ್ತಿದೆ. ಇದು ಸಂಪೂರ್ಣ ಎರಡು ರಾಷ್ಟ್ರಗಳಿಗೆ ಅಗತ್ಯ ಮೇರೆಗೆ ಮಾಡಿಕೊಂಡ ಒಪ್ಪಂದಗಳಾಗಿದ್ದು, ಇದರಿಂದ ಯಾರಿಗೂ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದೆ.