ಬಾಂಗ್ಲಾದಲ್ಲಿ ಬೆಲೆ ಏರಿಕೆ ವಿರುದ್ಧ ಜನಾಕ್ರೋಶ

ಬಾಂಗ್ಲಾದೇಶ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಬಾಂಗ್ಲಾದೇಶದಲ್ಲಿ ಬಿಕ್ಕಟ್ಟಿನ ವಾತಾವರಣ ತಲೆದೋರಿದೆ. ಇದಲ್ಲದೇ ಬಾಂಗ್ಲಾದೇಶ ಮತ್ತು ಚೀನಾ ಮಧ್ಯೆ ವಿಪತ್ತು ನಿರ್ವಹಣೆ ಹಾಗೂ ಸಾಂಸ್ಕೃತಿಕ ಸಹಕಾರ ಸೇರಿದಂತೆ ನಾಲ್ಕು ಒಪ್ಪಂದಗಳಿಗೆ ಪರಸ್ಪರ ಸಹಿ ಹಾಕಲಾಗಿದೆ. ಇಂದು ಚೀನಾ ವಿದೇಶಾಂಗ ಸಚಿವರು ಬಾಂಗ್ಲಾದೇಶಕ್ಕೆ ಆಗಮಿಸಿದ್ದು, ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾಗಲಿದ್ದಾರೆ. ಇತ್ತ ಇಂಧನ ಬೆಲೆ ಏರಿಕೆ ಖಂಡಿಸಿ ಜನರು ಪ್ರತಿಭಟನೆ ನಡೆಸಿದ್ದು, ಹಲವಡೆ ಹಿಂಸಾಚಾರಕ್ಕೆ ತಿರುಗಿದೆ.