ಬ್ರಿಟನ್ ಪಿಎಂ ಚುನಾವಣೆಯಲ್ಲಿ ರೋಚಕ ಟ್ವಿಸ್ಟ್.! ರಿಷಿ ಸುನಕ್‌ಗೆ ಹಿನ್ನಡೆ.!

ಬ್ರಿಟನ್‌ನಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ರಿಷಿ ಸುನಕ್ ಗೆಲುವು ಬಹುತೇಕ ಖಚಿತವಾಗಿತ್ತು. ಆದರೆ ಚುನಾವಣೆಯ ಕೊನೆ ಹಂತದಲ್ಲಿ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ರಿಷಿ ಸುನಕ್‌ಗೆ ಅಲ್ಪ ಹಿನ್ನಡೆಯಾಗಿದೆ. ಹೀಗಾಗಿ ಭಾರತದಲ್ಲೂ ಬ್ರಿಟನ್ ಪ್ರಧಾನಿ ಆಯ್ಕೆ ವಿಚಾರದಲ್ಲಿ ಕುತೂಹಲ ಮನೆ ಮಾಡಿದೆ. ಎರಡನೇ ಹಂತದ ಚುನಾವಣೆಯಲ್ಲಿ ಸುನಕ್‌ರನ್ನು ಹಿಂದಿಕ್ಕಿ ಲಿಜ್ ಟ್ರುಸ್ ಪ್ರಧಾನಿ ರೇಸ್‌ನಲ್ಲಿ ಮುಂದಿದ್ದು ಭಾರೀ ಪೈಪೋಟಿ ಏರ್ಪಟ್ಟಿದೆ.

ಎರಡನೇ ಹಂತದ ಚುನಾವಣೆಯಲ್ಲಿ ರೋಚಕ ಟ್ವಿಸ್ಟ್.!

ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹೊಸ ಪ್ರಧಾನಿ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಒಟ್ಟು 13 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಈ ಪೈಕಿ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಮತ್ತು ವಿದೇಶಾಂಗ ಸಚಿವೆ ಲಿಜ್ ಟ್ರುಸ್ ಮಾತ್ರ ಪ್ರಧಾನಿ ರೇಸ್‌ನಲ್ಲಿ ಉಳಿದುಕೊಂಡಿದ್ದಾರೆ. ಮೊದಲ ಐದು ಸುತ್ತುಗಳಲ್ಲಿ ರಿಷಿ ಸುನಕ್ ಮೊದಲ ಸ್ಥಾನ ಕಾಯ್ದುಕೊಂಡು ಬಂದಿದ್ದರು. ಆದರೆ ಎರಡನೇ ಹಂತದಲ್ಲಿ ಸುನಕ್ ಹಿನ್ನಡೆ ಅನುಭವಿಸಿದ್ದಾರೆ.

ಸುನಕ್ ರನ್ನ ಹಿಂದಿಕ್ಕಿದ ಲಿಜ್ ಟ್ರುಸ್.!

ಮೊದಲ ಹಂತದ ಐದು ಸುತ್ತುಗಳು ಮುಗಿದಿದ್ದು, ರಿಷಿ ಸುನುಕ್ ಮುನ್ನಡೆ ಸಾಧಿಸಿದ್ದರು. ಆದರೆ 2ನೇ ಹಂತದ ಚುನಾವಣೆಯಲ್ಲಿ ರಿಷಿ ಸುನುಕ್‌ರನ್ನು ಹಿಂದಿಕ್ಕಿರುವ ಲಿಜ್ ಟ್ರುಸ್ 24 ಅಂಕಗಳಿಂದ ಮುನ್ನಡೆ ಸಾಧಿಸಿದ್ದಾರೆ. ಬ್ರಿಟನ್ ಪ್ರಧಾನಿ ಪಟ್ಟಕ್ಕೆ ಕೇವಲ ಒಂದು ಹೆಜ್ಜೆ ಮಾತ್ರ ಇದ್ದು, ಕೊನೆ ಕ್ಷಣದಲ್ಲಿ ಪ್ರಧಾನಿ ಯಾರಾಗಲಿದ್ದಾರೆ.? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.