ಕೊಲಂಬೊ: ಶ್ರೀಲಂಕಾ ನೂತನ ಪ್ರಧಾನಿಯಾಗಿ ಹಿರಿಯ ರಾಜಕಾರಣಿ ದಿನೇಶ್ ಗುಣವರ್ಧನೆ ಶುಕ್ರವಾರ ಅಧಿಕಾರ ವಹಿಸಿಕೊಂಡರು. ಶ್ರೀಲಂಕಾ ರಾಜಕೀಯದ ಧೀಮಂತ ನಾಯಕ ಗುಣವರ್ಧನೆ ವಿದೇಶಾಂಗ ಸಚಿವರಾಗಿ ಮತ್ತು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಏಪ್ರಿಲ್‌ನಲ್ಲಿ ಅಂದಿನ ಅಧ್ಯಕ್ಷ ಗೋಟಬಯ ರಾಜಪಕ್ಸೆ ಇವರನ್ನ ಗೃಹ ಸಚಿವರಾಗಿ ನೇಮಿಸಿದ್ದರು.
ಇನ್ನು ಗೊಟಬಯ ರಾಜಪಕ್ಸೆ ದೇಶದಿಂದ ಪಲಾಯನ ಮಾಡಿದ ನಂತರ ಲಂಕಾದಲ್ಲಿ ಮರುಚುನಾವಣೆ ನಡೆದು ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾದ 8ನೇ ಕಾರ್ಯಕಾರಿ ಅಧ್ಯಕ್ಷರಾಗಿ ಸಂಸತ್ ಸಂಕೀರ್ಣದಲ್ಲಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.