ಸ್ವಿಟ್ಜರ್ಲಾಂಡ್: ಮಂಕಿಪಾಕ್ಸ್ ಲಸಿಕೆ 100 % ಸುರಕ್ಷಿತವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಜನರು ಮಂಗನ ಕಾಯಿಲೆಯ ವಿರುದ್ಧ ಜಾಗೃತರಾಗಿರುವಂತೆ ಸೂಚಿಸಿದೆ. ಕಳೆದ ವಾರದಲ್ಲಿ ವಿಶ್ವದಾದ್ಯಂತ 7,500 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, ಭೀತಿ ಉಂಟುಮಾಡಿದೆ..
ಇಲ್ಲಿಯವರೆಗೆ, 92 ದೇಶಗಳಲ್ಲಿ 35,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, 12 ಜನ ಸಾವನ್ನಪ್ಪಿದ್ದಾರೆ. WHO ವಕ್ತಾರ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಂಗನ ಕಾಯಿಲೆ ಪ್ರಕರಣಗಳ ಕುರಿತು ಮಾತನಾಡಿ, ಈ ರೋಗದ ಬಗ್ಗೆ ಎಲ್ಲರೂ ಎಚ್ಚರದಿಂದಿರಬೇಕು. ಪ್ರಸ್ತುತ ಲಭ್ಯವಿರುವ ಮಂಕಿಪಾಕ್ಸ್ ಲಸಿಕೆಗಳು ಶೇ.100 ರಷ್ಟು ಸುರಕ್ಷಿತವಾಗಿಲ್ಲ. ಆದ್ದರಿಂದ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುವವರು, ರೋಗದ ತೀವ್ರತೆಯಿಂದ ಬಳಲುತ್ತಿರುವವರು ಹಾಗೂ ಇತರರು ಮಂಗನ ಕಾಯಿಲೆಗೆ ತುತ್ತಾಗದಂತೆ ನೋಡಿಕೊಳ್ಳುವುದು ಉತ್ತಮ. ಸೋಂಕಿಗೆ ಒಳಗಾಗುವ ಸ್ಥಳಗಳಿಗೆ ಹೋಗುವುದನ್ನು ನಿಲ್ಲಿಸಿ, ನೈರ್ಮಲ್ಯೀಕರಣದ ಕುರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.