ಷೇರು ಮಾರುಕಟ್ಟೆಯ ‘ಬಿಗ್‌ಬುಲ್’ ರಾಕೇಶ್ ಜುಂಜುನ್ವಾಲಾ ನಿಧನ

ಮುಂಬೈ: ದಲಾಲ್ ಸ್ಟ್ರೀಟ್ ಷೇರು ಮಾರುಕಟ್ಟೆಯ ಖ್ಯಾತ ಉದ್ಯಮಿ ರಾಕೇಶ್ ಜುಂಜುನ್ವಾಲಾ ಹೃದಯಘಾತದಿಂದ ನಿಧನರಾಗಿದ್ದಾರೆ.

ಇಂದು ಬೆಳಗ್ಗೆ 6:30ಕ್ಕೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಉದ್ಯಮಿ ರಾಕೇಶ್ ಜುಂಜುನ್ ವಾಲಾ ಕೊನೆಯುಸಿರೆಳಿದಿದ್ದಾರೆ. 62 ವರ್ಷದ ಖ್ಯಾತ ಉದ್ಯಮಿ ಹೂಡಿಕೆದಾರರಾದ ರಾಕೇಶ್ ಜುಂಜುನ್ ವಾಲಾ ಬಹು ಅಂಗಾಂಗ ವೈಫಲ್ಯದಿಂದ , ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.