ಮೊದಲ ಬಾರಿ ದೇಶವನ್ನು ಉದ್ದೇಶಿಸಿ ಸ್ವಾತಂತ್ರ‍್ಯೋತ್ಸವ ಭಾಷಣ ಮಾಡಲಿರುವ ದ್ರೌಪದಿ ಮುರ್ಮು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು 75 ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಭಾನುವಾರ ರಾಷ್ಟ್ರವನ್ನುದ್ದೇಶಿಸಿ ತಮ್ಮ ಮೊದಲ ಭಾಷಣ ಮಾಡಲಿದ್ದಾರೆ ಎಂದು ರಾಷ್ಟ್ರಪತಿ ಕಚೇರಿ ತಿಳಿಸಿದೆ.

ಆಲ್ ಇಂಡಿಯಾ ರೇಡಿಯೊ ಮತ್ತು ದೂರದರ್ಶನದ ಎಲ್ಲಾ ಚಾನಲ್‌ಗಳಲ್ಲಿ ಸಂಜೆ 7 ರಿಂದ ಹಿಂದಿಯಲ್ಲಿ ರಾಷ್ಟçಪತಿ ಭಾಷಣವನ್ನು ಪ್ರಸಾರ ಮಾಡಲಾಗುತ್ತದೆ. ನಂತರ ಇಂಗ್ಲೀಷ್ ಆವೃತ್ತಿಯಲ್ಲಿ ಪ್ರಸಾರ ಮಾಡಲಾಗುತ್ತದೆ.
ರಾಷ್ಟ್ರೀಯ ದೂರದರ್ಶನದಲ್ಲಿ ಪ್ರಸಾರವಾಗುವ ಹಿಂದಿ ಮತ್ತು ಇಂಗ್ಲೀಷ್ ಭಾಷಣವನ್ನು ದೂರದರ್ಶನದ ಪ್ರಾದೇಶಿಕ ಚಾನೆಲ್‌ಗಳು ಸ್ಥಳೀಯ ಭಾಷೆಗಳಲ್ಲಿ ನಂತರದಲ್ಲಿ ಪ್ರಸಾರ ಮಾಡಲಿವೆ. ರೇಡಿಯೊ ತನ್ನ ಪ್ರಾದೇಶಿಕ ನೆಟ್‌ವರ್ಕ್ಗಳಲ್ಲಿ ರಾತ್ರಿ 9.30 ಕ್ಕೆ ಪ್ರಸಾರ ಮಾಡಲಿದೆ.