ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಕೋತಿಗಳ ಕುಚೇಷ್ಟೆ.! ತಾಯಿ ಕೋತಿಯ ಜೊತೆ ಮರಿ‌ಗಳ ಚಿನ್ನಾಟ.! ವೀಡಿಯೋ ವೈರಲ್.!

ಮೈಸೂರು: ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಕೋತಿಗಳ ಆಟ ಬಲು ಜೋರಾಗಿದೆ. ಮರದಲ್ಲಿ ಜೋಕಾಲಿ ಆಡುತ್ತಾ ಕೋತಿಗಳು ಸಂಭ್ರಮಿಸುತ್ತಿವೆ. ತಾಯಿ ಕೋತಿ ಜೊತೆ ಮರಿ‌ ಕೋತಿಯ ಚಿನ್ನಾಟ ಸ್ಥಳೀಯರಾದ ನವೀನ್ ಮೊಬೈಲ್‌ನಲ್ಲಿ ಸೆರೆಯಾಗಿದೆ. ವಾಹನಗಳಿಗೆ ಹೆದರದೇ ರಸ್ತೆಯಲ್ಲೇ ಕುಳಿತು ತಾಯಿ ಕೋತಿ ಮರಿಗಳೊಂದಿಗೆ ಆಟ
ಆಟವಾಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.