ಡೆತ್ ಓವರ್ಗಳಲ್ಲಿ ರನ್ ಬಿಟ್ಟುಕೊಡ್ತಿದ್ದ ಟೀಂ ಇಂಡಿಯಾ ವೇಗಿ ಬೌಲರ್ ಗಳಾದ ಹರ್ಷಲ್ ಪಟೇಲ್ ಮತ್ತು ಭುವನೇಶ್ವರ್ ಕುಮಾರ್ ಸಾಕಷ್ಟು ಟೀಕೆಗೆ ಓಳಗಾಗಿದ್ದರು. ಆದರೀಗ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಇವರಿಬ್ಬರ ಬೆಂಬಲಕ್ಕೆ ನಿಂತಿದ್ದಾರೆ.
ಈ ಕುರಿತು ಮಾತಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ಹರ್ಷಲ್, ಭುವಿ ಟೀಂ ಇಂಡಿಯಾದ ಸ್ಟಾರ್ ಬೌಲರ್ಸ್ ಗಳಾಗಿದ್ದಾರೆ. ಇತ್ತೀಚೆಗಷ್ಟೇ ಹರ್ಷಲ್ ಗಾಯದಿಂದ ಸುಧಾರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಇನ್ನು, ಹರ್ಷಲ್ 2 ತಿಂಗಳುಗಳ ಕಾಲ ಕ್ರಿಕೆಟ್ ನಿಂದ ದೂರವಾಗಿದ್ರು. ಅವರಿಗೆ ಕೆಲ ಸಮಯ ಬೇಕಷ್ಟೆ. ಅದೇ ರೀತಿ ಭುವಿ ಕೂಡ ಕೆಟ್ಟದಿನಗಳಿಂದ ಒಳ್ಳೆಯ ದಿನಗಳಿಗೆ ಬರಲಿದ್ದಾರೆ ಎಂದು ಹೇಳಿದ್ದಾರೆ.