COA ವಿಸರ್ಜಿಸಿದ ಸುಪ್ರೀಂ ಕೋರ್ಟ್;ಫಿಫಾಗೆ ಎಐಎಫ್‌ಎಫ್ ಸಂವಿಧಾನವನ್ನು ಪರಿಷ್ಕರಿಸಲು ಆದೇಶ


ನವದೆಹಲಿ: 17 ವರ್ಷದೊಳಗಿನ ಮಹಿಳಾ ಫುಟ್ಬಾಲ್ ವಿಶ್ವಕಪ್ ಆತಿಥ್ಯ ವಹಿಸುವ ಭಾರತದ ಹಕ್ಕನ್ನು ಕಸಿದುಕೊಂಡ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್‌ಎಫ್) ಅನ್ನು ಫಿಫಾ ಅಮಾನತುಗೊಳಿಸಿದೆ. ಈ ಹಿನ್ನೆಲೆ ಸುಪ್ರೀಂಕೋರ್ಟ್ ಎಐಎಫ್‌ಎಫ್ ಸಂವಿಧಾನವನ್ನು ಫಿಫಾಗೆ ಅನುಗುಣವಾಗಿ ಪರಿಷ್ಕರಿಸಬೇಕು. ಅಲ್ಲದೇ ಒಂದು ವಾರದೊಳಗೆ ಚುನಾವಣೆ ನಡೆಸಬೇಕು ಎಂದು ಎಐಎಫ್‌ಎಫ್ ಗೆ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಮುಂಬರುವ ಚುನಾವಣೆಗೆ ಮತದಾರರ ಪಟ್ಟಿಯು 36 ರಾಜ್ಯ ಸಂಘಗಳ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ ಎಂದು ಘೋಷಿಸಿದೆ. ಚುನಾವಣಾ ಪ್ರಕ್ರಿಯೆಗೆ ನೇಮಿಸಲಾದ ರಿಟರ್ನಿಂಗ್ ಅಧಿಕಾರಿಯನ್ನು ‘ಈ ನ್ಯಾಯಾಲಯವು ನೇಮಿಸಿದೆ ಎಂದು ಪರಿಗಣಿಸಲಾಗುವುದು’ ಎಂದು ನ್ಯಾಯಾಲಯ ಆದೇಶಿಸಿದೆ. ಎಐಎಫ್‌ಎಫ್ನ ದೈನಂದಿನ ವಿಷಯಗಳನ್ನು ಪರಿಶೀಲಿಸುವಂತೆ ಇದರ ಪ್ರಧಾನ ಕಾರ್ಯದರ್ಶಿ ನೇತೃತ್ವದ ಆಡಳಿತಕ್ಕೆ ಸೂಚಿಸಿದೆ.