ಚಿನ್ನ ಗೆದ್ದ ಸಿಂಧು

ಬರ್ಮಿಂಗ್‌ಹ್ಯಾಂ: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧು ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್ ಪಂದ್ಯದಲ್ಲಿ ಕೆನಡಾ ಆಟಗಾರ್ತಿ ಮಿಚೆಲ್ ಲೀ ಮಣಿಸಿದ ಸಿಂಧು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇಲ್ಲಿಯವರೆಗೆ ಭಾರತ ಕಾಮನ್ವೆಲ್ತ್ ಗೇಮ್ಸ್ನಲ್ಲಿ 18 ಚಿನ್ನ, 15 ಬೆಳ್ಳಿ ಹಾಗೂ 22 ಕಂಚಿನ ಪದಕ ಗೆದ್ದಿದೆ.