ಹೊನ್ನಾವರ: ತಾಲೂಕಿನ ಗೇರುಸೊಪ್ಪಾದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಯೋಜನಾ ಪ್ರದೇಶದ ಕಚೇರಿಯಲ್ಲಿ ದಸರಾವನ್ನು ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ 9 ದಿನಗಳ ಕಾಲವೂ ಮಹಿಳಾ ಸಿಬ್ಬಂದಿಗಳು ವಿವಿಧ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ವಿಶೇಷವಾಗಿ ನವರಾತ್ರಿ ಆಚರಣೆಯನ್ನು ಮಾಡುತ್ತಿದ್ದಾರೆ. ಪ್ರತಿದಿನವೂ ವಿವಿಧ ಬಣ್ಣಗಳ ಉಡುಗೆಯನ್ನು ಧರಿಸಿ ಕಚೇರಿಯ ಕೆಲಸದಲ್ಲಿ ತೊಡಗಿಕೊಳ್ಳಲು ಮುಂದಾಗಿರುವುದು ಇತರ ಕಚೇರಿಯ ಮಹಿಳಾ ಸಿಬ್ಬಂದಿಗಳಿಗೆ ಮಾದರಿಯಾಗಿದೆ.