ಹೊನ್ನಾವರ: ತಾಲೂಕಿನ ಕರ್ಕಿ ತೂಗು ಸೇತುವೆ ಸಂಪೂರ್ಣವಾಗಿ ಹಾಳಾಗಿದ್ದನ್ನ ಮನಗಂಡು ಕರುನಾಡ ವಿಜಯ ಸೇನೆಯು ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದರು. ಪ್ರತಿನಿತ್ಯ ಓಡಾಡುವ ಶಾಲಾ ಕಾಲೇಜು ಮಕ್ಕಳಿಗೆ, ದಿನಗೂಲಿ ಕೆಲಸಗಾರರಿಗೆ, ಸಂಚಾರಿಗಳಿಗೆ ಎದುರಾಗಿರುವ ಕಷ್ಟಗಳನ್ನು ಅವಲೋಕಿಸಿ ಅವರಿಂದಲೇ ಸಮಸ್ಯೆ ಬಗ್ಗೆ ಕೇಳಿದರು.
ಸೇತುವೆ ಕೆಳಭಾಗದಲ್ಲಿ ಕಬ್ಬಿಣದ ಕಂಬಿಗಳು ತುಂಡಾದ ಪರಿಸ್ಥಿತಿ ಇದೆ. ಹೀಗಾಗಿ ಮುಂದಿನ ವಾರದೊಳಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕೆಂದು ಆಗ್ರಹಿಸಿದರು. ಜನ ಪ್ರತಿನಿಧಿಗಳು ಆಶ್ವಾಸನೆಯಲ್ಲೆ ದಿನ ಕಳೆಯುತ್ತಿದ್ದಾರೆ ಎಂದು ಸ್ಥಳಿಯರು ಆರೋಪಿಸಿದರು. ಇದನ್ನ ಮನಗಂಡ ಕರುನಾಡ ವಿಜಯ ಸೇನೆಯವರು ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಬೇಕೆಂದು ಒತ್ತಾಯಿಸಿ ಕರೆಸುವಲ್ಲಿ ಯಶಸ್ವಿಯಾದರು.
ತಹಶಿಲ್ದಾರ ನಾಗರಾಜ ನಾಯ್ಕಡ್, ಪಿಡಿಒ ಕಿರಣ್ ಸಹ ಬಂದು ಪರಿಸ್ಥಿತಿ ಅವಲೋಕಿಸಿ ಜನರ ಸಮಸ್ಯೆಯನ್ನು ಆಲಿಸಿದರು. ಶೀಘ್ರವಾಗಿ ಸಮಸ್ಯೆಗೆ ಸ್ಪಂದಿಸದೇ ಇದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಕರುನಾಡ ವಿಜಯ ಸೇನೆಯವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿನಾಯಕ ಆಚಾರಿ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ನಾಯ್ಕ,ತಾಲೂಕ ಯುವ ಘಟಕದ ಅಧ್ಯಕ್ಷ ನಿತಿನ್ ಆಚಾರ್ಯ,ಉಪಾಧ್ಯಕ್ಷ ಸಂದೇಶ ನಾಯ್ಕ,ಪ್ರಧಾನ ಕಾರ್ಯದರ್ಶಿ ರಾಹುಲ್ ಜಿ, ಸಾಮಾಜಿಕ ಜಾಲತಾಣದ ಶ್ರೀನಿವಾಸ ನಾಯ್ಕ ಹಾಗೂ ಅನೇಕ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.