ಸಿಇಟಿಯಲ್ಲಿ ಕಡಿಮೆ ರ‍್ಯಾಂಕ್ ಬಂದಿದ್ದಕ್ಕೆ ಖಿನ್ನತೆಗೆ ಒಳಗಾಗಿ ಯುವತಿ ಆತ್ಮಹತ್ಯೆ.!

ದಾವಣಗೆರೆ: ಸಿಇಟಿಯಲ್ಲಿ ಕಡಿಮೆ ರ‍್ಯಾಂಕ್ ಬಂದಿದೆ ಎಂದು ಮನನೊಂದು ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ಜಗಳೂರು ಪಟ್ಟಣದ ಮುಸ್ಲಿಂ ಕಾಲೋನಿಯ 3 ನೇ ಕ್ರಾಸ್ ನಲ್ಲಿ ನಡೆದಿದೆ. 18 ವರ್ಷದ ಚೈತ್ರ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದು, ದ್ವೀತಿಯ ಪಿಯುಸಿ ಮುಗಿಸಿ ಎಂಬಿಸಿಎಸ್ ಓದಬೇಕು ಎನ್ನುವ ಕನಸನ್ನು ಕಂಡಿದ್ದಳು.

ರಾತ್ರಿ ಹಗಲೆನ್ನದೆ ಓದುತ್ತಿದ್ದ ಈಕೆಗೆ ಸಿಇಟಿ ಫಲಿತಾಂಶ ದಲ್ಲಿ ಕಡಿಮೆ ರ‍್ಯಾಂಕ್ ಬಂದಿತ್ತು. ಇದರಿಂದ ಸಾಕಷ್ಟು ಖಿನ್ನತೆಗೆ ಒಳಗಾದ ಚೈತ್ರ ಸರಿಯಾಗಿ ಊಟ ನಿದ್ದೆ ಮಾಡದೆ ಸಾಕಷ್ಟು ಮನನೊಂದಿದ್ದಳು. ಪೋಷಕರು ಬೇರೆ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಕೋಣೆ ಒಳಗೆ ಹೋಗಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.