ಸೆ.7 ವರೆಗೆ ಪಿ. ಎಂ. ಕಿಸಾನ್ ಇ-ಕೆವೈಸಿ ಅವಧಿ ವಿಸ್ತರಣೆ

ಕಾರವಾರ: ಪಿ. ಎಂ. ಕಿಸಾನ್ ಇ-ಕೆವೈಸಿ ಮಾಡಿಕೊಳ್ಳಲು ಸೆಪ್ಟೆಂಬರ್ 7 ವರೆಗೆ ಅವಧಿ ವಿಸ್ತರಿಸಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿಯನ್ನು ಮಾಡಿಸಿಕೊಳ್ಳಬೇಕು.

ತಮ್ಮ ತಾಲೂಕಿನ ಹತ್ತಿರದ ನಾಗರೀಕ ಸೇವಾ ಕೇಂದ್ರ, ಹತ್ತಿರದ ಪೋಸ್ಟ ಆಫೀಸ್, ಗ್ರಾಮ್‌ಒನ್ ಸೇವಾ ಕೇಂದ್ರಗಳಲ್ಲೂ ಬಯೋಮೆಟ್ರಿಕ ಆಧಾರಿತ ಇ-ಕೆವೈಸಿ ಹಾಗೂ http://pmkisan.gov.in ಪೋರ್ಟಲ್‌ನಲ್ಲಿ ಓಟಿಪಿ ಆಧಾರಿತ ಇ-ಕೆವೈಸಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಓಟಿಪಿ ಆಧಾರಿತ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇ-ಕೆವೈಸಿ ಮಾಡಿಸಿಕೊಂಡ ರೈತರಿಗೆ ಮಾತ್ರ 12 ನೇ ಕಂತಿನ ಆರ್ಥಿಕ ನೆರವನ್ನು ಬಿಡುಗಡೆ ಮಾಡಲಾಗುವುದು.

ಜಿಲ್ಲೆಯ ಎಲ್ಲಾ ಅರ್ಹರೈತ ಫಲಾನುಭವಿಗಳು ಆರ್ಥಿಕ ನೆರವು ಪಡೆಯಲು ಕಡ್ಡಾಯವಾಗಿ ಇ-ಕೆವೈಸಿ ಮಾಡಬೇಕು ಎಂದು ಕಾರವಾರ ಜಂಟಿ ಕೃಷಿ ನಿದೇಶಕರು ತಿಳಿಸಿದ್ದಾರೆ.