ಕಾರವಾರ, ನವೆಂಬರ್ 12: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ನ್ಯೂಕ್ಲಿಯರ್ ಪ್ಲ್ಯಾಂಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಕ್ಷಣಾ ಸಿಬ್ಬಂದಿ ತನ್ನ ಪಿಸ್ತೂಲಿನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಡನೆ ನಡೆದಿದೆ. ಬಿಹಾರ ಮೂಲಕ ಅರವಿಂದ್ ಮೃತ ಸಿಐಎಸ್‌ಎಫ್ ಸಿಬ್ಬಂದಿ. ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಕಾರಣದಿಂದಲೋ ಅಥವಾ ಅಧಿಕಾರಿಗಳ ಕಾರಣದಿಂದಲೋ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದು ಇನ್ನೂ ತಿಳಿದಿಲ್ಲ. ಸದ್ಯ ರಕ್ಷಣಾ ಸಿಬ್ಬಂದಿಯ ಆತ್ಮಹತ್ಯೆಯಿಂದ ಕೈಗಾದಲ್ಲಿ ಆತಂಕ ಸೃಷ್ಠಿಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶಂಕ್ರಪ್ಪ ಪತ್ತಾರ ಎಂಬ ಯುವಕನನ್ನು ಮೃತ ಯುವತಿ ಪ್ರೀತಿಸುತ್ತಿದ್ದಳು. ಮಗಳ ಸಾವಿಗೆ ಶಂಕ್ರಪ್ಪ ಮದುವೆ ಆಗಲು ನಿರಾಕರಿಸಿದ್ದು ಕಾರಣವೆಂದು ಪೋಷಕರು ಆರೋಪಿಸಿದ್ದಾರೆ. ಶಂಕ್ರಪ್ಪ ಹಾಗೂ ತಂದೆ-ತಾಯಿ, ಸಹೋದರಿ ವಿರುದ್ಧ ಯುವತಿ ಪೋಷಕರು ದೂರು ನೀಡಿದ್ದರು. ಆದರೆ ಪ್ರಕರಣ ದಾಖಲಾಗಿ ಒಂದು ತಿಂಗಳು ಕಳೆದರೂ ಆರೋಪಿಗಳನ್ನ ಬಂಧಿಸಿಲ್ಲ. ಆರೋಪಿಗಳಿಗೆ ಪೊಲೀಸರು ಸಹಕಾರ ನೀಡಿದ್ದು, ಜಾಮೀನು ಸಿಗುವಂತೆ ನೋಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ ಶಂಕ್ರಪ್ಪ ಮತ್ತು ಕುಟುಂಬಸ್ಥರು ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಮಗಳ ಸಾವಿಗೆ ನ್ಯಾಯ ಕೊಡುಸುವಂತೆ ಪೋಷಕರು ಎಸ್ಪಿ ಕಚೇರಿಗೆ ಆಮಿಸಿದ ಪೋಷಕರು ಎಸ್ಪಿ ಅಮರನಾಥ ರೆಡ್ಡಿಗೆ ಮನವಿ ಮಾಡಿದ್ದಾರೆ.