ಸಾಫ್ಟ್ ವೇರ್ ಉದ್ಯೋಗಿ ಕೈಯಲ್ಲಿ ಮೂಡಿದ ಸುಂದರ ಗಣಪ.! ಯುವತಿಯ ಕಾರ್ಯಕ್ಕೆ ಭೇಷ್ ಎಂದ ಜನ.!

ಶಿರಸಿ: ತಾಲೂಕಿನ ಹೆಗ್ಗರಸಿ ಮನೆಯ ರಾಜಶ್ರೀ ರಾಜರಾಮ್ ಭಟ್ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಈಕೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ರಜೆಯಲ್ಲಿ ಮನೆಗೆ ಬಂದು ತನ್ನ ಮನೆಯಲ್ಲಿ ಹಬ್ಬ ಆಚರಣೆಗಾಗಿ ಗಣೇಶನ ವಿಗ್ರಹವನ್ನು ತಾನೇ ನಿರ್ಮಿಸಿದ್ದಾಳೆ.

ಯಾವ ಕಲಾವಿದರಿಗೂ ಕಡಿಮೆಯಿಲ್ಲ ಎಂಬಂತೆ ಸುಂದರವಾದ ಪರಿಸರ ಸ್ನೇಹಿ ಗಣಪನನ್ನು ತಯಾರಿಸಿದ್ದಾಳೆ. ಕಲೆಯ ಹವ್ಯಾಸ ಬೆಳೆಸಿಕೊಂಡಿರುವ ಈಕೆ ತಮ್ಮ ಸಂಬಂಧಿಕರ ಮನೆಗೂ ನಾಲ್ಕು ಗಣೇಶ ವಿಗ್ರಹಗಳನ್ನು ನೀಡಿದ್ದಾಳೆ. ಲಕ್ಷ ರೂ. ಸಂಬಳ ಪಡೆಯುವ ನೌಕರರು ಇತ್ತೀಚಿನ ವರ್ಷಗಳಲ್ಲಿ ಐಶಾರಾಮಿ ಜೀವನ ನಡೆಸುತ್ತ ಮಾರುಕಟ್ಟೆಯಲ್ಲಿ ಸಿಗುವ ಆಧುನಿಕ ಜೀವನ ನಡೆಸುವವರಿಗೆ ಈ ಯುವತಿ ಮಾದರಿಯಾಗಿದ್ದಾಳೆ.

ಧಾರವಾಡದ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ದಲ್ಲಿ ಚಿನ್ನದ ಪದಕ ಪಡೆದಿರುವ ಈಕೆ ಭಾರತೀಯ ಸಂಪ್ರದಾಯವನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ. ಇಂತಹ ಸಾಕಷ್ಟು ಪ್ರತಿಭೆಗಳು ಗ್ರಾಮೀಣ ಭಾಗದಲ್ಲಿ ಕಾಣ ಸಿಗುತ್ತಿರುವುದು ನಮ್ಮ ಭಾಗ್ಯ. ಪ್ರತಿಭೆಗಳು ಎಲ್ಲಿದ್ದರು ಪ್ರಜ್ವಲಿಸುತ್ತದೆ ಎಂಬುದಕ್ಕೆ ಈ ಯುವತಿ ಸಾಕ್ಷಿ. ವಿದ್ಯಾವಂತ ಯುವತಿಗೆ ಸುತ್ತಮುತ್ತಲಿನ ಜನತೆ ಶುಭ ಹಾರೈಸಿದ್ದಾರೆ.

ನನಗೆ ಬಾಲ್ಯದಿಂದಲೂ ಕಲೆಯಲ್ಲಿ ಹವ್ಯಾಸವಿದೆ. ಮೂರ್ತಿಯನ್ನು ನಿರ್ಮಾಣವು ಮನಸ್ಸಿಗೆ ಸಂತೋಷ ಉಂಟುಮಾಡುತ್ತದೆ. ಯುವ ಜನತೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿಬೇಕು.

– ರಾಜಶ್ರೀ ರಾಜರಾಮ್ ಭಟ್, ಸಾಪ್ಟ್ ವೇರ್ ಇಂಜಿನಿಯರ್