ಓಸಿ ಅಡ್ಡೆ ಮೇಲೆ ಪೊಲೀಸ್ ರೈಡ್.! ಇಬ್ಬರ ಬಂಧನ

ಶಿರಸಿ: ಓಸಿ ಚೀಟಿ ಬರೆಯುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿರುವ ಘಟನೆ ತಾಲೂಕಿನ ಬನವಾಸಿಯಲ್ಲಿ ಮಂಗಳವಾರ ನಡೆದಿದೆ.
ಸೊರಬ ರಸ್ತೆಯ ವಿವೇಕಾನಂದ ಆರೇರ್, ಆದರ್ಶ ನಗರದ ಸಂಜೀವ ಮುಡಾಯಿ ಬಂಧಿತ ಆರೋಪಿಗಳಾಗಳು

ಇವರು ಒಂದು ರೂ ಗೆ 80 ರೂ. ನೀಡುವುದಾಗಿ ಜನರಿಂದ ಹಣ ಪಡೆಯುತ್ತಿದ್ದರು. ಬಂಧಿತರಿಂದ 6690 ರೂ. ಮತ್ತು ಇನ್ನಿತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.