ದಿ.ರಾಮಕೃಷ್ಣ ಹೆಗಡೆಯವರ ಜನ್ಮ ದಿನಾಚರಣೆಯ ಪ್ರಯುಕ್ತ ಹೆಗಡೆಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದ ಅಭಿಮಾನಿ ಬಳಗ

ಶಿರಸಿ: ಮೌಲ್ಯಾಧಾರಿತ ರಾಜಕಾರಕ್ಕೆ ಮುನ್ನುಡಿ ಬರೆದ ದೇಶ ಕಂಡ ಚಾಣಕ್ಷ ರಾಜಕಾರಣಿ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರ 97 ನೇ ಜನ್ಮ ದಿನಾಚರಣೆಯನ್ನು ದಿ. ರಾಮಕೃಷ್ಣ ಹೆಗಡೆಯವರ ಅಭಿಮಾನಿ ಬಳಗದಿಂದ ಶ್ರದ್ದಾಭಕ್ತಿಯಿಂದ ಆಚರಣೆ ಮಾಡಲಾಯಿತು. ಅಭಿಮಾನಿ ಬಳಗದ ಸದಸ್ಯರು ಬೆಳಿಗ್ಗೆ ಯಲ್ಲಾಪುರ ರಸ್ತೆಯಲ್ಲಿರುವ ರಾಮಕೃಷ್ಣ ಹೆಗಡೆ ಸರ್ಕಲ್ ಬಳಿಯಿರುವ ರಾಮಕೃಷ್ಣ ಹೆಗಡೆಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಸಿಹಿ ವಿತರಣೆ ಮಾಡಿದರು.

ದಿ. ರಾಮಕೃಷ್ಣ ಹೆಗಡೆ ಅಭಿಮಾನಿ ಬಳಗದ ವೆಂಕಟೇಶ ಹೆಗಡೆ ಹೊಸಬಾಳೆ ಮಾತನಾಡಿ, ನಮ್ಮ ಜಿಲ್ಲೆಯ ಹೆಮ್ಮೆಯ ಪುತ್ರರಾಗಿರುವ ರಾಮಕೃಷ್ಣ ಹೆಗಡೆಯವರು 50 ವರ್ಷಗಳ ಕಾಲ ರಾಜ್ಯ ಮತ್ತು ದೇಶ ರಾಜಕಾರಣದಲ್ಲಿ ಪ್ರಮಾಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅವರ ಪುತ್ಥಳಿಯನ್ನು ರಾಜ್ಯದಲ್ಲಿಯೇ ಮೊದಲ ಬಾರಿ ಶಿರಸಿಯಲ್ಲಿ ಸ್ಥಾಪನೆಗೊಂಡಿರುವುದು ನಮಗೆ ಅಭಿಮಾನದ ಸಂಗತಿಯಾಗಿದೆ ಎಂದರು.

ಪ್ರಮೋದ ಹೆಗಡೆ ಮಾತನಾಡಿ, ರಾಜ್ಯ ಸರಕಾರ ಎಳು ವಿಶ್ವವಿದ್ಯಾಲಯವನ್ನು ಮಂಜೂರಿಮಾಡಿದ್ದು ಅದರಲ್ಲಿ ಒಂದು ವಿಶ್ವ ವಿದ್ಯಾಲಯ ಉತ್ತರಕನ್ನಡಕ್ಕೆ ಬರುವ ಸಾದ್ಯತೆಯಿದೆ. ಈ ವಿಶ್ವವಿದ್ಯಾಲಯಕ್ಕೆ ಹೆಗಡೆಯವರ ಹೆಸರು ನಾಮಕರಣ ಮಾಡಬೇಕೆಂದು ಮನವಿ ಮಾಡಲಾಗಿದೆ. ಅವರು ಐದು ಪೊಲಿಟಿಕಲ್ ಫಿಲೊಸಫಿ ಬರೆದಿದ್ದಾರೆ. ಅವರು 35 ವರ್ಷಗಳ ಹಿಂದೆ ಬರೆದ ‘ಥೋಟ್ಸ್ ಎಂಡ್ ವಿಸನ್ ಆಫ್ ಹೆಗಡೆ’ ಈ ಲೇಖನದಲ್ಲಿ ಬರೆದ ಎಲ್ಲ ಅಂಶಗಳು ಇಂದಿಗೂ ಪ್ರಸ್ತುತವಾಗಿದೆ. ತೋಳಬಲ ಮತ್ತು ಹಣ ಬಲದ ಕಪಿ ಮುಷ್ಠಿಯಿಂದ ಭಾರತದ ಪ್ರಜಾಪ್ರಭುತ್ವ ಪಾರಾಗಬೇಕು. ಜಾತೀಯತೆ ಹೀಗೆ ಅನೇಕ ವಿಚಾರಗಳನ್ನು ಬರೆದಿದ್ದಾರೆ. ಅವರ ಬರೆದಿರುವ ರಾಜಕೀಯ ವಿಚಾರಗಳು ನೂರು ವರ್ಷಗಳ ಕಾಲ ಶಾಶ್ವತವಾಗಿ ಇರುವಂತೆ ವಿಚಾರಮಾಡಿ ಬರೆದಿದ್ದಾರೆಂದು ಹೇಳಿದರು.

ಈ ಸಂಧರ್ಭದಲ್ಲಿ ದಿ.ರಾಮಕೃಷ್ಣ ಹೆಗಡೆ ಅಬಿಮಾನಿ ಬಳಗದ ಎನ್ ಪಿ ಗಾಂವ್ಕರ್, ರಮೇಶ ದುಬಾಶಿ, ಸತೀಶ ನಾಯ್ಕ, ಆರ್ ಎಂ ಹೆಗಡೆ ಹಲಸರ್ಗಿ, ಜಿ ಎನ್ ಹೆಗಡೆ ಮುರೆಗಾರ ಮತ್ತಿತರು ಉಪಸ್ಥಿತರಿದ್ದರು.