ಭಟ್ಕಳ: ಜೆಸಿಐ ಭಟ್ಕಳ ಸಿಟಿ ಹಾಗೂ ಕರಾವಳಿ ಕಾವಲು ಪೊಲೀಸ್ ಠಾಣೆ , ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಹಾಗೂ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆ ಇವರ ಸಹಯೋಗದೊಂದಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ರಕ್ತದಾನ ಎನ್ನುವುದು ನಮಗೆ ಜೀವನದ ಒಂದು ಅಂಗವಾಗಿದೆ. ತಿಂಗಳಿಗೆ ಒಂದು ಬಾರಿ ಆದರೂ ಭಟ್ಕಳದಲ್ಲಿ ರಕ್ತದಾನ ಶಿಬಿರ ನಡೆಯುತ್ತದೆ. ಜೀವನದಲ್ಲಿ ಒಳ್ಳೆ ಕೆಲಸ ಕಾರ್ಯ ಮಾಡಿದರೆ ಅಂತವರಿಗೆ ಎಂದಿಗೂ ಕೆಟ್ಟದಾಗಲ್ಲ ಎಂದು ಹೇಳಿದರು.
ಕುಂದಾಪುರದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷರಾದ ಜಯಕರ್ ಶೆಟ್ಟಿ ಮಾತನಾಡಿ, ಭಟ್ಕಳ ಹಾಗೂ ಕುಂದಾಪುರಕ್ಕೆ ಒಂದು ನಿಕಟವಾದ ಸಬಂದವಿದೆ. ಪ್ರತಿ ನಿತ್ಯ ಭಟ್ಕಳದಿಂದ ಕುಂದಾಪುರದ ವಿವಿಧ ಆಸ್ಪತ್ರೆಗೆ ತಮ್ಮ ಆರೋಗ್ಯ ತಪಾಸಣೆಗೆ ಬರುತ್ತಾರೆ. ಅಂತವರಿಗೆ ರಕ್ತದ ಅವಶ್ಯಕತೆ ಇದ್ದರೆ ನಮ್ಮ ಸಂಸ್ಥೆಯಿಂದ ರಕ್ತ ಪೂರೈಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ನಂತರ ಶಿಬಿರದಲ್ಲಿ ಒಟ್ಟು 59 ಶಿಬಿರಾರ್ಥಿಗಳಿಂದ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸ ನಿರೀಕ್ಷಕರಾದ ಕೃಷ್ಣಾನಂದ ನಾಯ್ಕ, ಜೆಸಿ ಭಟ್ಕಳ ಸಿಟಿಯ ಅಧ್ಯಕ್ಷರಾದ ಜೆಸಿ ಪಾಂಡುರಂಗ ನಾಯ್ಕ, ಜಿಸಿಐ ಇಂಡಿಯಾ ಸೀನಿಯರ್ ಮೆಂಬರ್ ಅಸೋಸಿಯೇಷನ್ ಚೇರ್ಮನ್ ಅಬ್ದುಲ್ ಜಬ್ಬರ್ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.