ಶಿರಸಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮೀಣ ಭಾಗದ ಪ್ರಮುಖ ಸಮಸ್ಯೆಗಳನ್ನ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ 75 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಮಿ ಹಕ್ಕು, ಮೂಲ ಸೌಕರ್ಯಕ್ಕಾಗಿ ‘ಹಳ್ಳಿ ಕಡೆ ನಡಿಗೆ’ ಜಿಲ್ಲಾಮಟ್ಟದ ಬೃಹತ್ ಕಾರ್ಯಕ್ರಮ ನಡೆಸಿ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ
ಆಗ್ರಹಿಸಲಾಯಿತು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಸೋಮವಾರ ದೇವನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಕರೂರ ಈಶ್ವರ ದೇವಾಲಯದಿಂದ ‘ಹಳ್ಳಿ ಕಡೆ ನಡೆಗೆ’ ಕಾರ್ಯಕ್ರಮ ಪ್ರಾರಂಭವಾಗಿ 7 ಕೀ.ಮೀ ಸಂಚರಿಸಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಜರುಗಿದ ಸಭೆಯಲ್ಲಿ ತಹಶೀಲ್ದಾರ್ ಶ್ರೀಧರ ಮಂದಲಮನಿ ಅವರಿಗೆ ಸರ್ಕಾರದ ಪರವಾಗಿ ಮನವಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಬಂದಿರುವ ಗ್ರಾಮಸ್ಥರು ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಪರಿಹಾರಕ್ಕಾಗಿ ವಯಕ್ತಿಕ ಅರ್ಜಿಗಳನ್ನು ಸಲ್ಲಿಸಿದರು.
ಸಭೆಯಲ್ಲಿ ಮಾರುತಿ ನಾಯ್ಕ, ವೆಂಕಟು ಗೌಡ, ರಾಮು ಗೌಡ, ತಿಮ್ಮ ರಾಮ ಗೌಡ, ಗೋವಿಂದ ಯಂಕು ಗೌಡ ಮುಂತಾದವರು ಮಾತನಾಡಿ ಸ್ಥಳೀಯ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದರು. ಅಂಕೋಲಾ ತಾಲೂಕ ಅಧ್ಯಕ್ಷ ರಮಾನಂದ ನಾಯ್ಕ ಅಚಿವೆ, ನೆಹರೂ ನಾಯ್ಕ, ಎಮ್ ಆರ್ ನಾಯ್ಕ, ಎಮ್ ಕೆ ನಾಯ್ಕ, ಚಂದ್ರು ನಾಯ್ಕ, ರಾಮಚಂದ್ರ ಮರಾಠಿ ಮುಂತಾದವರು ಉಪಸ್ಥಿತರಿದ್ದರು.