ಕಾರವಾರ: ಹುಬ್ಬಳ್ಳಿಯ ಸೀಮೆಎಣ್ಣೆ ಎಚ್.ಪಿ.ಸಿ ಟರ್ಮಿನಲ್ ಮುಚ್ಚಿದ ಹಿನ್ನೆಲೆಯಲ್ಲಿ ಪ್ರಸ್ತುತವಾಗಿ ಗೋವಾದ ವಾಸ್ಕೋದಲ್ಲಿನ ಸೀಮೆಎಣ್ಣೆ ಎಚ್.ಪಿ.ಸಿ ಟರ್ಮಿನಲ್‌ನಿಂದ ಜೋಯಿಡಾ ತಾಲೂಕಿಗೆ ಸೀಮೆ ಎಣ್ಣೆ ಎತ್ತುವಳಿಗೆ ತಗುಲುವ ಹೆಚ್ಚುವರಿ ಸಾರಿಗೆ ವೆಚ್ಚವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ ನೀಡಿದರು.
ನಗರದ ಜಿಲಾಧಿಕಾರಿಗಳ ಸಭಾಭವನದಲ್ಲಿ ನಡೆದ ಸೀಮೆ ಎಣ್ಣೆ ವಿಷಯದ ಕುರಿತು ಚರ್ಚೆ ಸಭೆಯಲ್ಲಿ ಮಾತನಾಡಿದ ಅವರು ಪ್ರಸುತ್ತ ಕಾರ್ಯ ನಿರ್ವಹಿಸುತಿರುವ ಸೀಮೆಎಣ್ಣೆ ಡೀಲರ್ಸ್ಗಳು ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕುಗಳಿಗೆ ಆದಷ್ಟು ಬೇಗ ಮುಂದಿನ ತಿಂಗಳಲ್ಲಿ ಸೀಮೆ ಎಣ್ಣೆ ಎತ್ತುವಳಿ ಮಾಡುವ ಕಾರ್ಯವಾಗಬೇಕು ಹಾಗೂ ಅದಕ್ಕೆ ಸಂಬಂಧಿಸಿದ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಸೀಮೆ ಎಣ್ಣೆ ಎತ್ತುವಳಿ ಕಾರ್ಯಕ್ಕೆ ಕೆಲವು ಡೀಲರ್ಸ್ಗಳು ಆರ್ಥಿಕ ಹೊರೆ ಎದುರಿಸುತ್ತಿದ್ದು, ಇನ್ನೊಂದು ಕಡೆ ಸಗಟು ನಾಮಿನಿದಾರರಿಗೆ ಹೆಚ್ಚುವರಿ ಸೀಮೆ ಎಣ್ಣೆ ಹಂಚಿಕೆ ಮಾಡಿದ್ದಲ್ಲಿ ಸ್ವಂತ ಲಾರಿಗಳಿಲ್ಲದೆ ಎತ್ತುವಳಿ ಹಾಗೂ ಹಂಚಿಕೆಗೆ ತೊಂದರೆಯಾಗುತ್ತಿದ್ದು, ಈ ಸಮಸ್ಯೆಯನ್ನು ಕೂಡಲೇ ಪರಿಹರಿಸಿ, ಸಾಧ್ಯವಾದಷ್ಟು ಸಮಯದಲ್ಲಿ ಜಿಲ್ಲೆಯಲ್ಲಿ ಸೀಮೆಎಣ್ಣೆ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಪ್ರತಿ ತಿಂಗಳಿಗೆ ಅಯುಕ್ತರು ನೀಡಿದ ಸೀಮೆಎಣ್ಣೆ ಹಂಚಿಕೆ ಪ್ರಮಾಣದಲ್ಲಿ ಐ.ಒ.ಸಿ, ಬಿ.ಪಿ.ಸಿ ಮತ್ತು ಎಚ್.ಪಿ.ಸಿ ಕಂಪನಿವಾರು ಬಿಡುಗಡೆ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರಸ್ತುತವಾಗಿ 4 ಐ.ಒ.ಸಿ 2 ಬಿ.ಪಿ.ಸಿ ಮತ್ತು 3 ಎಚ್.ಪಿ.ಸಿಡೀಲರ್ ಗಳು ಕರ್ತವ್ಯ ನಿರ್ವಹಿಸಿಸುತ್ತಿದ್ದು, ಐ.ಒ.ಸಿ ಕಂಪನಿಗೆ 10 ಲೋಡ್, ಬಿ.ಪಿ.ಸಿ ಕಂಪನಿಗೆ 9 ಲೋಡ್ ಮತ್ತು ಎಚ್.ಪಿ.ಸಿ ಕಂಪನಿಗೆ 5 ಲೋಡ್ ಸೀಮೆ ಎಣ್ಣೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಸಭೆಯಲ್ಲಿ ವರದಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಖಜಾನಾಧಿಕಾರಿಗಳು ಕಾರವಾರ ಲೀಡ್ ಬ್ಯಾಂಕ್ ಮ್ಯಾನೆಜರ್, ಹಳಿಯಾಳ ಆಹಾರ ನಿರೀಕ್ಷಕರು ಹಾಗೂ ಜಿಲ್ಲೆಯ ಎಲ್ಲಾ ಸೀಮೆಎಣ್ಣೆ ಸಗಟು ನಾಮಿನಿದಾರರು ಉಪಸ್ಥಿತರಿದ್ದರು.