ಶಿರವಾಡ ಗ್ರಾ.ಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶ್ವಿನಿ ಬಾಂದೇಕರ್ (ನಾಯ್ಕ್) ಆಯ್ಕೆ

ಕಾರವಾರ: ಶಿರವಾಡ ಗ್ರಾಮ ಪಂಚಾಯತ್ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ. ಅಶ್ವಿನಿ ಬಾಂದೇಕರ್ (ನಾಯ್ಕ್) ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಇಂದು ನಡೆದ ಚುನಾವಣೆಯಲ್ಲಿ 14 ಜನ ಸದಸ್ಯರ ಪೈಕಿ ಒಬ್ಬ ಸದಸ್ಯರು ಗೈರಾಗಿದ್ದು 13 ಸದಸ್ಯರು ಮತ ಚಲಾಯಿಸಿದ್ದಾರೆ. ಚಲಾವಣೆಯಾದ 13 ಮತದಲ್ಲಿ 8 ಮತ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಬಿದ್ದಿದ್ದು ಅಶ್ವಿನಿ ಬಾಂದೇಕರ್ (ನಾಯ್ಕ್) ಗೆಲುವು ಸಾಧಿಸಿದ್ದಾರೆ. ಅಶ್ವಿನಿ ಬಾಂದೇಕರ್ ಅವರಿಗೆ ಶಾಸಕಿ ರೂಪಾಲಿ ನಾಯ್ಕ್ ಅಭಿನಂದನೆ ಸಲ್ಲಿಸಿದ್ದಾರೆ.

ಇನ್ನು ಗೆಲವು ಸಾಧಿಸಲು ಸಹಕರಿಸಿದ ಎಲ್ಲಾ ಮತದಾರ ಸದಸ್ಯರಿಗೆ, ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ರವರಿಗೆ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಸುಭಾಷ್ ಗುನಗಿ, ಕಾರವಾರ ಯುವಮೋರ್ಚಾ ಅಧ್ಯಕ್ಷರಾದ ಶುಭಂ ಕಳಸ ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೆ ನೂತನ ಅಧ್ಯಕ್ಷೆ ಅಶ್ವಿನಿ ಬಾಂದೇಕರ ಧನ್ಯವಾದವನ್ನು ತಿಳಿಸಿದ್ದಾರೆ.