ತಾಯಿಯ ಮಮತೆಗೆ ಯಾವುದೂ ಸಾಟಿಯಿಲ್ಲ – ಡಾ. ವೈಶಾಲಿ ನಾಯ್ಕ

ಹೊನ್ನಾವರ: ನಮ್ಮ ದೇಶದಲ್ಲಿ ತಾಯಿಗೆ ದೇವರ ಸ್ಥಾನ ನೀಡಿದ್ದಾರೆ. ತಾಯಿಯ ಮಮತೆಗೆ ಯಾವುದೂ ಸಾಟಿಯಿಲ್ಲ ಎಂದು ಡಾ. ವೈಶಾಲಿ ನಾಯ್ಕ ಹೇಳಿದರು. ಪಟ್ಟಣದ ಹೊನ್ನಾವರ ನಂ. 1 ಶಾಲೆಯಲ್ಲಿ ಗುರುವಾರ ಆಯೋಜಿಸಿದ ತಾಯಂದಿರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೆಣ್ಣಿಗೆ ತಾಯಿ ಆಗುವ ಅವಕಾಶವನ್ನು ದೇವರು ಕೊಟ್ಟಿದ್ದಾನೆ. ತಾಯಿ ಮಕ್ಕಳಲ್ಲಿ ಒಳ್ಳೆಯ ಗುಣ ಕಲಿಸಿ ಉತ್ತಮ ನಾಗರಿಕರಾಗಿ ಮಾಡುತ್ತಾಳೆ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕಿ ಸೀಮಾ ನಾಯಕ, ದೀಪಾ ನರೇಂದ್ರ ಕಾಮತ, ಶಿಕ್ಷಕರಾದ ಕಮಲಾಕರ ನಾಯ್ಕ, ಶುಭಾ ನಾಯ್ಕ, ಪ್ರತಿಭಾ ನಾಯ್ಕ ಹಾಗೂ ವಿದ್ಯಾರ್ಥಿ ಪಾಲಕರು ಪಾಲ್ಗೊಂಡಿದ್ದರು.