ಕೊಳಗದ್ದೆ ಶ್ರೀ ಸಿದ್ದಿವಿನಾಯಕ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ವಲಯ ಮಟ್ಟದ ಕ್ರೀಡಾಕೂಟ

ಹೊನ್ನಾವರ: ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಸದೃಢ ದೇಹವನ್ನು ಪಡೆಯಬೇಕೆಂದರೆ ಆಟೋಟಗಳಲ್ಲಿ ಭಾಗವಹಿಸಬೇಕು ಎಂದು ಶ್ರೀ ಸಿದ್ದಿವಿನಾಯಕ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್.ಎಲ್ ನಾಯ್ಕ ಹೇಳಿದರು. ತಾಲೂಕಿನ ಖರ್ವಾ ಗ್ರಾ. ಪಂ ನ ಕೊಳಗದ್ದೆ ಶ್ರೀ ಸಿದ್ದಿವಿನಾಯಕ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ 2022-23 ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟ ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಗೋಪಾಲಕೃಷ್ಟ ದೇವಾಲಯದ ಅನ್ನದಾಸೋಹ ಸಮಿತಿಯ ಅಧ್ಯಕ್ಷ ವೇ. ಮೂ ಚರ್ಡಪ್ಪ ಭಟ್ಟ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವನ್ನ ಒಂದೇ ಮನಸ್ಸಿನಿಂದ ಸ್ವೀಕಾರ ಮಾಡುವುದು ಮುಖ್ಯವಾಗಿದೆ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಕ್ರೀಡಾ ಜ್ಯೋತಿ ಬೆಳಗಿಸಿದ ಮಾವಿನಕುರ್ವಾ ಗ್ರಾ,ಪಂ ಅಧ್ಯಕ್ಷ ಜಿ ಜಿ ಶಂಕರ್, ಸ್ಪರ್ಧೆಯಲ್ಲಿ ಗೆಲ್ಲಬೇಕು ಎನ್ನುವ ಛಲವಿರಬೇಕು. ರಾಷ್ಟ್ರಮಟ್ಟದಲ್ಲಿಯೂ ಸಹ ನಿಮ್ಮ ಪ್ರತಿಭೆ ಬೆಳಗಲಿ ಎಂದರು.

ಮಾವಿನಕುರ್ವಾ ಮಾಧ್ಯಮಿಕ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪಾಂಡುರಂಗ ಭಟ್ಟ ಕ್ರೀಡಾ ದ್ವಜಾರೋಹಣ ನೆರವೇರಿಸಿದರು. ವೇದಿಕೆಯಲ್ಲಿ ಸಮಿತಿಯ ಉಪಾಧ್ಯಕ್ಷ ಅರವಿಂದ ಭಕ್ತ, ಕಾರ್ಯದರ್ಶಿ ಗೋಪಾಲಕೃಷ್ಣ ಎನ್ ಭಟ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.