ಆ. 28 ರಂದು ವಿದ್ಯಾಧಿರಾಜ ಕಲಾ ಕ್ಷೇತ್ರದಲ್ಲಿ ‘ಕೊಂಕಣಿ ಲೋಕೋತ್ಸವ’

ಶಿರಸಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ವಿದ್ಯಾಧಿರಾಜ ಕಲಾ ಕ್ಷೇತ್ರದಲ್ಲಿ ಆ. 28 ರಂದು ಕೊಂಕಣಿ ಲೋಕೋತ್ಸವ ಆಯೋಜಿಸಲಾಗಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಂಚಾಲಕ ಡಾ. ವಸಂತ ಬಾಂದೇಕರ್ ಹೇಳಿದರು.

ಇಲ್ಲಿನ ನೆಮ್ಮದಿ ಕುಟೀರದಲ್ಲಿ ಗುರುವಾರ ಸುದ್ದಿಗೋಷ್ಟಿ ಆಯೋಜಿಸಿ ಮಾತನಾಡಿದ ಅವರು, 42 ವಿವಿಧ ಕೊಂಕಣಿ ಭಾಷಿಕ ಸಮುದಾಯ ಸೇರಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಉದ್ಘಾಟಿಸಲಿದ್ದು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸಮಾಜ ಸೇವಕ ಉಪೇಂದ್ರ ಪೈ, ನಗರಸಭೆ ಸದಸ್ಯ ಹರೀಶ ಪಾಲೇಕರ್, ಸೂರ್ಯಕಾಂತ ಗುಡಿಗಾರ್, ಜಿಲ್ಲಾ ದೈವಜ್ಞ ವಾಹಿನಿಯ ಸುಧಾಕರ್ ರಾಯ್ಕರ್ ಪಾಲ್ಗೊಳ್ಳಲಿದ್ದಾರೆ ಎಂದರು.

ಕೊಂಕಣಿಗರ ಹಿಂದಿನ ಮತ್ತು ಈಗಿನ ಜೀವನದ ಬಗ್ಗೆ ರಾಮು ಹರಿ ಕಿಣಿ ಉಪನ್ಯಾಸ ನೀಡಲಿದ್ದಾರೆ. ಶಿರಸಿಯ ಮಹಾವಿಷ್ಣು ದೇವಸ್ಥಾನದ ಮೊಕ್ತೇಸರ ವಿಷ್ಣುದಾಸ ಕಾಸರಕೋಡ್, ಕೊಂಕಣಿ ರಂಗ ಕಲಾಕಾರ ಸಾಂತಾ ಫರ್ನಾಂಡೀಸ್ ಅವರಿಗೆ ಸನ್ಮಾನ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಕೊಂಕಣಿಗರಿಗಾಗಿ ವಿವಿಧ ಸಾಂಪ್ರದಾಯಿಕ ಕಲಾ‌ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಿರಸಿ ಮಂಜು, ವಾಸುದೇವ ಶಾನುಭಾಗ ಇದ್ದರು.