ಜೊಯಿಡಾ: ಗುಂದ ಪ್ರೌಢಶಾಲೆ ಕಳೆದ ಹಲವು ವರ್ಷಗಳಿಂದ ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ಶೇ 100 ಸಾಧನೆ ಮಾಡುತ್ತಿದೆ. ಇದಕ್ಕೆ ಇಲ್ಲಿನ ಎಲ್ಲ ಶಿಕ್ಷಕರು ಮತ್ತು ಪಾಲಕರ ಸಹಕಾರ ಮತ್ತು ಮಕ್ಕಳ ಪರಿಶ್ರಮ ಇದೆ. ಸಮುದಾಯದ ಪಾಲ್ಗೊಳ್ಳುವಿಕೆಯಿಂದಲೇ ಶಾಲೆ ಅಭಿವೃದ್ಧಿ ಹೊಂದಲು ಸಾದ್ಯ ಎಂದು ಶಾಲೆಯ ಶಿಕ್ಷಕ ಗೋಕುಲ ಸ್ಥಳೇಕರ ಹೇಳಿದರು. ಅವರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ), ಜೊಯಿಡಾ ಪ್ರೆಸ್ (ರಿ) ವತಿಯಿಂದ ನಡೆಸಲಾದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸದಾನಂದ ಉಪಾಧ್ಯ ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ಸರಕಾರದ ಜೊತೆಗೆ ನಾವೂ ಸಹಕಾರ ನೀಡಿದಾಗ ಶಾಲೆಯ ಅಭಿವೃದ್ದಿಯಾಗುತ್ತದೆ. ಜೊಯಿಡಾ ಪತ್ರಕರ್ತ ಮಿತ್ರರು ನಮ್ಮ ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ನೀಡಿರುವುದು ಅಭಿನಂದನಾರ್ಹ ಎಂದರು.
ಪತ್ರಿಕಾ ದಿನಾಚರಣೆ ಅಂಗವಾಗಿ ಗುಂದ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಸುಮನಾ ಹರಿಜನ, ಸದಸ್ಯೆ ಶೋಬಾ ಎಲ್ಲೇಕರ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸದಾನಂದ ಉಪಾಧ್ಯ, ಜೋಯಿಡಾ ಪ್ರೆಸ್ ಉಪಾಧ್ಯಕ್ಷ ವಾಸುದೇವ ಸಾವಂತ, ಪತ್ರಕರ್ತ ಗಿರೀಶ ಭಾಗ್ವತ್ ಮುಂತಾದವರು ಉಪಸ್ಥಿತರಿದ್ದರು.