ಗಣೇಶೋತ್ಸವದ ಪ್ರಯುಕ್ತ ಸಾಧಕರಿಗೆ ಸನ್ಮಾನ: ಸೆ. 31 ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ಗೋಕರ್ಣ: ಕಳೆದ ಐದು ದಶಕಗಳಿಂದ ಸಾಮಾಜಿಕ ಚಟುವಟಿಕೆಯೊಂದಿಗೆ ಪ್ರತಿ ವರ್ಷ ಸಾರ್ವಜನಿಕ ಗಣೆಶೋತ್ಸವ ನಡೆಸುತ್ತಾ ಬಂದಿದ್ದು, ಈ ವರ್ಷ ಸುವರ್ಣ ಮಹೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ ಗಣೇಶ ಚತುರ್ಥಿ ಆಚರಿಸಲು ನಿರ್ಧರಿಸಿದ್ದೇವೆ ಎಂದು ಶ್ರೀ ವಿಜಯ ವಿನಾಯಕ ಸಾರ್ವಜನಿಕ ಗಣೆಶೋತ್ಸವ ಸಮಿತಿ ಗಣೇಶ ಪೈ ಹಾಗೂ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಗೋವಿಂದ ಗೌಡ ಹೇಳಿದರು

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಸಾಧಕರಿಗೆ, ವಿದ್ವಾಂಸರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದ್ದು, ಇದಕ್ಕೆ ಎಲ್ಲರ ಸಹಾಯ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ಸಮಿತಿಯ ಕಾರ್ಯದರ್ಶಿ ವೇ. ಗಜಾನನ ಹಿರೇ ಮಾತನಾಡಿ ಸಾರ್ವಜನಿಕ ಗಣೇಶೋತ್ಸವನ್ನು ತಾಲೂಕಿನಲ್ಲೇ ಪ್ರಥಮವಾಗಿ ಪ್ರಾರಂಭಿಸಿದ್ದು ನಮ್ಮ ಸಮಿತಿಯಾಗಿದೆ. ಸಾರ್ವಜನಿಕರ ಹಿತಕ್ಕಾಗಿ ಶಿಕ್ಷಣ, ಕೆರೆ ಸ್ವಚ್ಚತೆ, ಆರೋಗ್ಯ ಕ್ಷೇತ್ರಕ್ಕೆ ಸಹಾಯ ಸೇರಿದಂತೆ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು ನೀಡಲಾಗಿದೆ ಎಂದರು.

ಸೆ. 31 ರಂದು ಗಣೇಶ ಮೂರ್ತಿ ಪ್ರತಿಷ್ಠೆ ನಂತರ ವಿವಿಧ ದೈವಿಕ ಕೈಂಕರ್ಯ ನಡೆಯಲಿದ್ದು, ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ . ಸೆ. 4 ರವರೆಗೆ ಪ್ರತಿ ದಿನ ಮುಂಜಾನೆ ಗಣೇಶನಿಗೆ ವಿಶೇಷ ಪೂಜೆ ನಡೆಯಲಿದೆ. ಕಟ್ಟಿಗೆ ಡೀಪೋದಲ್ಲಿ ನಿರ್ಮಿಸಿದ ಸುವರ್ಣ ಮಹೋತ್ಸವದ ಭವ್ಯ ವೇದಿಕೆಯಲ್ಲಿ ಸಂಜೆ ರಸಮಂಜರಿ, ಯಕ್ಷಗಾನ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ, ಗಣೇಶನ ಮೂರ್ತಿ ಮಾಡಿದ ಕಲಾವಿದರಿಗೆ ಗೌರವಿಸಿ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೋಶಾಧ್ಯಕ್ಷ ರಮೇಶ ಪ್ರಸಾದ, ವೆಂಕಟದಾಸ್ ಕಾಮತ್, ಮಂಜುನಾಥ ಶೆಟ್ಟಿ, ಮುರಳಿ ಕಾಮತ್, ಗಜಾನನ ನಾಯಕ, ಅನಂತ ಹಾವಗೋಡಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.