ಕಾರವಾರದ ಇಸ್ಕಾನ್‌ನಲ್ಲಿ 5 ದಿನ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ

ಕಾರವಾರ: ಹಬ್ಬುವಾಡದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವವು ಈ ಬಾರಿ 5 ದಿನಗಳವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಆ. 16 ರಿಂದಲೇ ಆರಂಭಗೊಂಡಿದೆ ಎಂದು ಬುಧವಾರ ಇಸ್ಕಾನ್‌ ಪ್ರಮಖರಾದ ದಾಮೋದರ ಲೀಲಾದಾಸ್ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.

ಆ. 18 ರವರೆಗೆ ಪ್ರತಿದಿನ ಸಂಜೆ 6.30 ಕ್ಕೆ ಆರತಿ ಹಾಗೂ ಕೀರ್ತನೆ, 6.45 ರಿಂದ ಮುಂಬೈನ ಅನಂತ ಕೃಷ್ಣ ದಾಸ ಗೋಸ್ವಾಮಿ ಮಹಾರಾಜರಿಂದ ಕೃಷ್ಣಕಥೆ ನಡೆಯಲಿದೆ. ರಾತ್ರಿ 8.45 ಕ್ಕೆ ಎಲ್ಲ ಭಕ್ತಾದಿಗಳಿಗೆ ಅನ್ನದಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಆ.19 ರಂದು ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಬೆಳಿಗ್ಗೆ 5-8 ರವರೆಗೆ ಮಂಗಳಾರತಿ, ತುಳಸಿ ಆರತಿ, ಜಪ, ದರ್ಶನ ಆರತಿ ಹಾಗೂ ಗುರುಪೂಜೆಗಳು ನಡೆಯಲಿವೆ. 8-10 ರವರೆಗೆ ಶ್ರೀ ಕೃಷ್ಣ ಪ್ರವಚನ ನಡೆಯಲಿದ್ದು, ಸಂಜೆ 5 ಕ್ಕೆ ಕೀರ್ತನೆ, ಅಭಿಷೇಕ, ನಾಟ್ಯಲೀಲೆ, ಕೃಷ್ಣಕಥೆ ನಡೆಯಲಿದೆ. ಮಧ್ಯರಾತ್ರಿ 12 ಗಂಟೆಗೆ ಮಹಾ ಆರತಿ, ಕೀರ್ತನೆ ಬಳಿಕ ಮಹಾಪ್ರಸಾದ ವಿತರಣೆ ನಡೆಯಲಿದೆ.

ಇನ್ನು ಆ. 20 ರಂದು ಶ್ರೀಲ ಪ್ರಭುಪಾದರ ಅವಿರ್ಭಾವ ದಿನದ ಪ್ರಯುಕ್ತ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೀರ್ತನೆ, ಅಭಿಷೇಕ, ಗುಣ ಗೌರವ, ಪುಷ್ಪಾಂಜಲಿ, ಆರತಿ ಹಾಗೂ ಎಲ್ಲರಿಗೂ ಮಹಾಪ್ರಸಾದ ವಿತರಣೆ ನಡೆಯಲಿದೆ. ಈ ಎಲ್ಲ ಧಾರ್ಮಿಕ ಕೈಂಕರ್ಯಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಕೋರಿದ್ದಾರೆ. ಈ ಸಂದರ್ಭದಲ್ಲಿ ಇಸ್ಕಾನ್ ಪ್ರಮುಖರಾದ ಮಹೇಶ ಹರಿಕಾಂತ, ಇತಾಯಿ ಪದ್ಮದಾಸ್, ಗೋವಿಂದ ದತ್ತ ದಾಸ್ ಇದ್ದರು.