ಬೆಂಗಳೂರು: ಬಿಜೆಪಿಯ ಸಂಸದೀಯ ಮಂಡಳಿಯನ್ನು ಪುನಾರಚನೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇರುವ ಈ ಸಮಿತಿಗೆ ಬಿ.ಎಸ್.ಯಡಿಯೂರಪ್ಪ, ಬಿ.ಎಲ್.ಸಂತೋಷ್ ಅವರನ್ನು ರಾಜ್ಯದಿಂದ ಆಯ್ಕೆ ಮಾಡಲಾಗಿದೆ. ಸಂಸದೀಯ ಸಮಿತಿ ಕೇವಲ 11 ಸದಸ್ಯರನ್ನು ಒಳಗೊಂಡಿದೆ.
ಇನ್ನು ಬಿಎಸ್‌ವೈ ಚುನಾವಣಾ ಸಮಿತಿಯಲ್ಲೂ ಜವಾಬ್ದಾರಿಯನ್ನು ಹೊತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಂಸದೀಯ ಸಮಿತಿ ಹಾಗೂ ಚುನಾವಣಾ ಸಮಿತಿಯ ಮಾತೇ ಅಂತಿಮ ಎಂದು ವಿಶ್ಲೇಷಿಸಲಾಗಿದ್ದು, ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಯಡಿಯೂರಪ್ಪ ಅವರಿಗೆ ಬಿಜೆಪಿ ಮಹತ್ವದ ಹೊಣೆಗಾರಿಕೆ ನೀಡಿದೆ.