ಮುಂಡಗೋಡ: ಪಟ್ಟಣ ವ್ಯಾಪ್ತಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನ ಕಾರ್ಯಕ್ರಮ ಮುಗಿದು ಎರಡು ದಿನಗಳು ಕಳೆದರು ಕೆಲವು ಮನೆಗಳ ಮೇಲೆ ರಾಷ್ಟ್ರ ಧ್ವಜ ಇನ್ನೂ ಹಾರಾಡುತ್ತಿರುವುದು ದೇಶ ಪ್ರೇಮಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಬೇಸರವನ್ನುಂಟು ಮಾಡಿದೆ.
ಸರ್ಕಾರದ ಆದೇಶದಂತೆ ಆಗಸ್ಟ್ 13 ರಿಂದ 15 ರ ಸೂರ್ಯಾಸ್ತವಾಗುವ ಮೊದಲು ಮನೆ ಮನೆಗಳಲ್ಲಿ ಹಾಕಿದ ಧ್ವಜಗಳನ್ನು ತೆಗೆಯುವಂತೆ ಸರ್ಕಾರ ಆದೇಶ ನೀಡಿತ್ತು. ಆದರೆ ಧ್ವಜಾರೋಹಣ ಮುಗಿದು ಎರಡು ದಿನ ಕಳೆದರು ಪಟ್ಟಣದ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ರಾಷ್ಟ್ರಧ್ವಜ ಹಾರಾಡುತ್ತಿರುವುದು ಕಂಡು ಬಂದಿದೆ. ಅದರಲ್ಲೂ ರಾಜಕೀಯ ಮುಖಂಡನ ಮನೆಯ ಮೇಲೆ ಧ್ವಜ ಹಾರಾಡುತ್ತಿದ್ದು, ಆಗಸ್ಟ್ 17 ರ ಮಧ್ಯಾಹ್ನದ ವರೆಗೆ ಧ್ವಜ ಹಾರಾಡುತ್ತಿರುವುದು ಕಂಡು ಬಂದಿದೆ.
ಈ ಬಗ್ಗೆ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠಗೆ ಕೇಳಿದರೆ ಮನೆ ಮನೆಗೆ ನೀಡಿದ ಧ್ವಜದ ಜೊತೆಗೆ ಅದರ ಕರಪತ್ರ ಹಂಚಲಾಗಿತ್ತು. ಆದ್ದರಿಂದ ಈ ಬಗ್ಗೆ ನಾನು ಯವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಜಾರಿಕೊಂಡರು.
ಧ್ವಜದ ನಿರ್ವಹಣೆ ಬಗ್ಗೆ ಕರಪತ್ರ ನೀಡಿದ್ದಾರೆ. ಈವರೆಗೆ ಧ್ವಜವನ್ನು ತೆಗೆದಿಲ್ಲ ಎಂದರೆ, ಅವುಗಳನ್ನು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗೆ ಹೇಳಿ ತೆಗೆಸಲಾಗುವುದು.
– ಶಂಕರ್ ಗೌಡಿ, ತಹಶೀಲ್ದಾರ, ಮುಂಡಗೋಡ.