ಕುಮಟಾ: ಪಟ್ಟಣದ ಡಾ.ಎ.ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್.ಸಿ.ಸಿ ನೆವೆಲ್ ವಿಭಾಗದ ಇಬ್ಬರು ಕೆಡೆಟ್‌ಗಳು ರಾಷ್ಟ್ರೀಯ ಎನ್.ಸಿ.ಸಿ ಶಿಬಿರದಲ್ಲಿ ಭಾಗವಹಿಸಿ ತರಬೇತಿ ಪಡೆದುಕೊಂಡಿದ್ದಾರೆ. ನೆವೆಲ್ ವಿಭಾಗದ ಎಲ್.ಡಿ ಕೆಡೆಟ್ ಅರುಣ್ ಗೌಡ ಕೊಚ್ಚಿಯಲ್ಲಿ ಜು.3 ರಿಂದ ಜು.7 ರವರೆಗೆ ನಡೆದ ಸಮುದ್ರದ ಬಾಂಧವ್ಯ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಿದ್ದರು.
ಕೆಡೆಟ್‌ಗಳಿಗೆ ಯುದ್ಧನೌಕೆ ಕಾರ್ಯಾಚರಣೆ, ನ್ಯಾವಿಗೇಷನ್, ಸಂವಹನ, ಗನ್‌ರಿ, ಸೀಮನ್‌ಶಿಪ್ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಾಗಿದೆ. ಇನ್ನು ಮೇ.17 ರಿಂದ ಮೇ.26 ರವರೆಗೆ ಮತ್ತು ಜೂ.8 ರಿಂದ ಜೂ.17 ರವರೆಗೆ ಬೆಂಗಳೂರಿನಲ್ಲಿ ನಡೆದ ಎನ್.ಸಿ.ಸಿ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್ ಶಿಬಿರದ ಮಹಿಳಾ ವಿಭಾಗದಲ್ಲಿ ಎಲ್.ಡಿ ಕೆಡೆಟ್ ಸಹನಾ ನಾಯಕ ಭಾಗವಹಿಸಿದ್ದರು. ಈ ವೇಳೆ ನಡೆದ ಶೂಟಿಂಗ್ ಚಾಂಪಿಯನ್‌ಶಿಪ್‌ನ ಇಂಟರ್ ಗುಂಪು ಸ್ಪರ್ಧೆಯಲ್ಲಿ ಪ್ರತಿನಿಧಿಸಿದ್ದ ಸಹನಾ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾಳೆ.
ಕೆಡೆಟ್‌ಗಳ ಸಾಧನೆಗೆ ಎನ್.ಸಿ.ಸಿ ಕರ್ನಾಟಕ ನೌಕಾ ಘಟಕದ ಕಮಾಂಡರ್ ಸತ್ಯನಾಥ ಭೋಸ್ಲೆ, ಪ್ರಾಚಾರ್ಯ ಡಾ.ಎಸ್.ವಿ.ಗಾಂವ್ಕರ್ ಮತ್ತು ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ವಿ.ಆರ್.ಶಾನಭಾಗ ಹರ್ಷ ವ್ಯಕ್ತಪಡಿಸಿದ್ದಾರೆ.