ಫಿಫಾ ನಿಯಮಗಳ ಉಲ್ಲಂಘನೆ: ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ನಿಷೇಧ ಮಾಡಿ ಆದೇಶ

ಭಾರತ ಫುಟ್ಬಾಲ್ ಫೆಡರೇಶನ್ ನಲ್ಲಿ ಅನಗತ್ಯ ಹಸ್ತಕ್ಷೇಪ ಹಾಗೂ ಫಿಫಾ ನಿಯಮಗಳ ಉಲ್ಲಂಘನೆ ಕಾರಣದಿಂದ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಅನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ. ಫಿಫಾದ ಈ ನಿರ್ಧಾರ ಇದೀಗ ಭಾರತ ಫುಟ್ಬಾಲ್ ಫೆಡರೇಶನ್ ಗೆ ಭಾರಿ ಮುಖಭಂಗವನ್ನು ಉಂಟು ಮಾಡಿದೆ.

ಇನ್ನು ಫಿಫಾ ಭಾರತ ಫುಟ್ಬಾಲ್ ಫೆಡರೇಶನ್ ಮೇಲೆ ಹೇರಿರುವ ಈ ನಿಷೇಧದ ಪರಿಣಾಮ ಇದೀಗ ಇದೇ ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಅಂಡರ್ 17 ಮಹಿಳಾ ಫುಟ್ಬಾಲ್ ವಿಶ್ವಕಪ್ ಮೇಲೆ ಬೀರಿದ್ದು, ಭಾರತ ಈ ಮಹತ್ವದ ಟೂರ್ನಿಯ ಆತಿಥ್ಯ ವಹಿಸುವ ಅವಕಾಶವನ್ನು ಕಳೆದುಕೊಂಡಿದೆ.

ಭಾರತ ಫುಟ್ಬಾಲ್ ಫೆಡರೇಶನ್ ಒಳಗಡೆ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ, ಮಧ್ಯಸ್ಥಿಕೆ ಮತ್ತು ನಿರ್ಧಾರಗಳು ನಡೆಯುತ್ತವೆ ಎಂಬುದನ್ನು ಪತ್ತೆ ಹಚ್ಚಿರುವ ಫಿಫಾ ಈ ನಿಷೇಧವನ್ನು ಸುಲಭವಾಗಿ ತೆಗೆದು ಹಾಕುವ ಸಾಧ್ಯತೆಗಳಿಲ್ಲ.