ಗೇರುಸೊಪ್ಪ ಬಳಿ ಲಾರಿ ಪಲ್ಟಿ- ಇಬ್ಬರ ದುರ್ಮರಣ

ಹೊನ್ನಾವರ: ತಾಲೂಕಿನ ಗೇರುಸೊಪ್ಪ ಸಾಗರ ರಸ್ತೆಯ ಸುಳಿಮುರ್ಖಿ ತಿರುವಿನಲ್ಲಿ ಲಾರಿಯೊಂದು ಪಲ್ಟಿಯಾದ ಪರಿಣಾಮ ಈರ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಬ್ಬಿಣದ ಆಟದ ಸಾಮಾನುಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿ ಇಂದು ಜ.6ರ ಮಧ್ಯರಾತ್ರಿ 2 ಘಂಟೆಯ ವೇಳೆಯಲ್ಲಿ ಪಲ್ಟಿಯಾಗಿ ಇಬ್ಬರು ಮೃತ ‌ಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಮೃತರು ಮತ್ತು ಗಾಯಳುಗಳು ಮೂಲತಃ ಬಿಹಾರ ರಾಜ್ಯದವರಾಗಿದ್ದಾರೆ

ಗಾಯಗೊಂಡವರನ್ನು ಹೊನ್ನಾವರ ಸರ್ಕಾರಿ ಆಸ್ಪತಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ..