
ಹೊನ್ನಾವರ ಡಿಸೆಂಬರ್ 08 : ನಾಯಿಯೊಂದು ಏಕಾಏಕಿ ಅಡ್ಡಬಂದ ಪರಿಣಾಮ ಹೊನ್ನಾವರ ತಾಲೂಕಿನ ಮುಗ್ವಾದಲ್ಲಿ ಕೊರಿಯರ್ ಗೂಡ್ಸ್ ವಾಹನ ಪಲ್ಟಿ ಹೊಡೆದಿದ್ದು ಚಾಲಕ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ…

ಮುಗ್ವಾದಲ್ಲಿ ಕೋರಿಯರ್ ಗೂಡ್ಸ್ ವಾಹನ ಪಲ್ಟಿ ಹೊಡೆದ ಘಟನೆ ನಡೆದಿದೆ. ಕೋರಿಯರ್ ಗೂಡ್ಸ್ ವಾಹನ ಇಳಿಜಾರಿನಲ್ಲಿ ಸಾಗುತ್ತಿರುವಾಗ ನಾಯಿಯೊಂದು ಏಕಾಏಕಿ ಅಡ್ಡ ಬಂದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ಪಕ್ಕದ ಕಂದಕದ ಬಳಿ ಪಲ್ಟಿ ಹೊಡೆದಿದೆ.

ವಾಹನ ಪಲ್ಟಿ ಹೊಡೆದ ರಭಸಕ್ಕೆ ಚಾಲಕನ ಪ್ರಾಣ ಉಳಿದಿದ್ದೇ ಹೆಚ್ಚು. ಆದರೂ ಚಾಲಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಈ ಕೊರಿಯರ್ ಗೂಡ್ಸ್ ವಾಹನ ಹುಬ್ಬಳ್ಳಿಯಿಂದ ಹೊನ್ನಾವರಕ್ಕೆ ಬರುವಾಗ ಈ ಘಟನೆ ನಡೆದಿದ್ದು, ಕ್ರೇನ್ ಮೂಲಕ ಮೇಲಕ್ಕೆತ್ತಲಾಗಿದೆ…