ಅಕ್ರಮ ಮದ್ಯ ಸಾಗಾಟ ; 35.46 ಲೀ ಮದ್ಯ ಮತ್ತು ಓರ್ವನ ಬಂಧನ..

ಹೊನ್ನಾವರ ಡಿಸೆಂಬರ್‌ 07: ಗೋವಾದಿಂದ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಹೊನ್ನಾವರ ತಾಲೂಕಿನ ರಾಮತೀರ್ಥ ಕ್ರಾಸ್‌ನಿಂದ ಹೋಗುವ ರಸ್ತೆಯ ಚಂದ್ರಾಣಿ ಕೆರೆಯ ಪಕ್ಕದಲ್ಲಿ ಶನಿವಾರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ ಅಕ್ರಮ ಗೋವಾ ಮದ್ಯವನ್ನು ಪತ್ತೆ ಹಚ್ಚಿ 35. 46 ಲೀಟರಷ್ಟು ಮದ್ಯ ಹಾಗೂ ಹುಂಡೈ ಕಾರು ಹಾಗೂ ಓರ್ವನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಭದ್ರಾವತಿಯ ಸೋಮಶೇಖರ ಬಿ. ಎನ್ನಲಾಗಿದ್ದು, ಈ ಕುರಿತು ಹೊನ್ನಾವರ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…