ಶಾಸಕ ದಿನಕರ ಶೆಟ್ಟಿ ಕಾರಿನ ಹಿಂಬದಿಗೆ ಬೈಕ್ ಡಿಕ್ಕಿ- ಮಣಿಪಾಲ್‌ ಆಸ್ಪತ್ರೆಗೆ ಸವಾರ

ಸಾಂದರ್ಭಿಕ ಚಿತ್ರ..

ಹೊನ್ನಾವರ ಡಿಸೆಂಬರ್‌ 08 : ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಅವರ ಕಾರಿನ ಹಿಂಬದಿಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರನ ತಲೆಗೆ ಗಂಭೀರವಾದ ಘಟನೆ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಕರ್ಕಿ ನಾಕಾ ಬಳಿ ನಡೆದಿದೆ..

ಗಾಯಗೊಂಡ ವ್ಯಕ್ತಿಯನ್ನು ಹಳದಿಪುರದ ನಿವಾಸಿ ನಾಗಪ್ಪ ಗೌಡನಿ ಎಂದು ಗುರುತಿಸಲಾಗಿದೆ. ಶಾಸಕ ದಿನಕರ ಶೆಟ್ಟಿಯವರು ಹೊನ್ನಾವರದ ಕರ್ಕಿ ನಾಕಾ ಬಳಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು, ಈ ವೇಳೆ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದಾಗ, ಕಾರು ಚಾಲಕ ಕಾರನ್ನು ಹಿಂದಕ್ಕೆ ತೆಗೆಯುವಾಗ ಹೊನ್ನಾವರ ಕಡೆಯಿಂದ ಬಂದ ಬೈಕ್ ಸವಾರ ಹಿಂದುಗಡೆ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ತಲೆಗೆ ಬಲವಾದ ಗಾಯವಾಗಿದೆ.

ಕೂಡಲೇ ಶಾಸಕ ದಿನಕರ ಶೆಟ್ಟಿ ಗಾಯಗೊಂಡ ವ್ಯಕ್ತಿಯನ್ನು ತಮ್ಮ ಕಾರಿನಲ್ಲಿ ಹೊನ್ನಾವರದ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೊನ್ನಾವರ ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ರೆಗಾಗಿ ಮಣಿಪಾಲ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಬೈಕ್‌ ಸವಾರ ಮದ್ಯ ಸೇವನೆ ಮಾಡಿದ್ದ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಹೊನ್ನಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಮಣಿಪಾಲ್‌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ತೆರಳಿದ್ದು, ಸ್ಕ್ಯಾನಿಂಗ್‌ ನಂತರವೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ..