ಯುವಮೋರ್ಚಾ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಬೃಹತ್ ಬೈಕ್ ಜಾಥಾ

ಕಾರವಾರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾರವಾರ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ವತಿಯಿಂದ ಬೃಹತ್ ಬೈಕ್ ಜಾಥಾ ಆಯೋಜಿಸಲಾಗಿತ್ತು. ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ನೂರಾರು ಯುವಕರು ಬೈಕ್ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಸಂಪೂರ್ಣ ಜಾಥಾ ಭಾರತ ಧ್ವಜದಿಂದ ಕಂಗೊಳಿಸುತ್ತಿತ್ತು. ಭಾರತ ಮಾತಾ ಕೀ ಜೈ ಘೋಷಣೆಗೆ ಸಾರ್ವಜನಿಕರಿಂದ ಬಾರಿ ಪ್ರಶಂಸೆ ವ್ಯಕ್ತವಾಯಿತು.ಹರ ಘರ್ ತಿರಂಗಾ ಅಭಿಯಾನದ ಅಂಗವಾಗಿ ಆಯೋಜಸಲಾಗಿದ್ದ ಈ ಜಾಥಾ ನಗರ ಯುವಮೋರ್ಚಾ ಅಧ್ಯಕ್ಷರಾದ ಶ್ರೀ ಶುಭಂ ಕಳಸ ಹಾಗೂ ಗ್ರಾಮೀಣ ಯುವಮೋರ್ಚಾ ಅಧ್ಯಕ್ಷರಾದ ಶ್ರೀ ಪ್ರಣವ ರಾಣೆ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಜಾಥಾವನ್ನು ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶ್ರೀ ನಾಗೇಶ ಕುರುಡೆಕರ ಹಾಗೂ ಶ್ರೀ ಸುಭಾಷ್ ಗುನಗಿ ಇವರು ಚಾಲನೆ ನೀಡಿದರು.ಕಾರವಾರ ನಗರದ ಮಿತ್ರ ಸಮಾಜದಿಂದ ಹೋರಟ ಜಾಥಾ ನಗರದ ವಿವಿಧ ಮಾರ್ಗದಲ್ಲಿ ಚಲಿಸಿ, ಶೇಜವಾಡ್, ಶಿರವಾಡ್, ಕಡವಾಡದಿಂದ ಮರಳಿ ಸುಂಕೇರಿ ಮಾರ್ಗವಾಗಿ ನಗರಸಭೆಯ ಉದ್ಯಾನವನದಲ್ಲಿರುವ ಮಹಾತ್ಮ ಗಾಂಧಿಜೀ, ವಿರಯೋದ ಹೆಂಜಾ ನಾಯ್ಕ್ ಹಾಗೂ ಛತ್ರಪತಿ ಶಿವಾಜಿಯ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಮುಕ್ತಾಯವಾಯಿತು.

ಜಾಥಾದಲ್ಲಿ ನಗರಸಭೆಯ ಅಧ್ಯಕ್ಷರಾದ ಶ್ರೀ ನಿತಿನ್ ಪಿಕಳೆ ಯುವಮೋರ್ಚಾ ನಗರ ಹಾಗೂ ಗ್ರಾಮೀಣ ಮಂಡಲದ ಸದಸ್ಯರಾದ ಶ್ರೀ ಪರಭತ್ ನಾಯ್ಕ್, ನಾಗರಾಜ್ ದುರ್ಗೆಕರ್, ಅಮಿತ್ ನಾಯ್ಕ್, ನಿಕೆತ ಮಾಜಾಳಿಕರ, ಪುನೀತ್, ಸುದೇಶ್, ನವಿನ್, ಸಂದೇಶ್, ದರ್ಶನ್ ಮಾಜಾಳಿಕರ, ಕಿಶನ್ ಕಾಂಬ್ಳೆ, ಗ್ರಾಮೀಣ ಮಂಡಲ ಪದಾಧಿಕಾರಿಗಳು. ಕಾರ್ಯಕರ್ತರು ಹಾಗೂ ಇನ್ನಿತರು ಭಾಗಿಯಾಗಿದ್ದರು.