artificial heart : ಎಲ್ಲರ ಹೃದಯ ಲಬ್ ಡಬ್ ಅಂದರೆ ಈ ವ್ಯಕ್ತಿಯ ಹೃದಯವು ಎಲೆಕ್ಟ್ರಿಕ್ ಮಷಿನ್ ನಂತೆ ಶಬ್ಧ ಮಾಡುತ್ತದೆ. ಸಿಲಿಕಾನ್ ಸಿಟಿಯಲ್ಲಿ ಮೊದಲ ಆರ್ಟಿಫಿಶಿಯಲ್ ಹಾರ್ಟ್ ಅಳವಡಿಕೆ ಮಾಡಲಾಗಿದೆ. ಹಾರ್ಟ್ಮೇಟ್ 3 ಬ್ಯಾಟರಿ ಮೂಲಕ ಹೃದಯ ಕೆಲಸ ಮಾಡುತ್ತದೆ. ಥರ್ಡ್ ಜನರೇಶನ್ ಹಾರ್ಟ್ ಜೋಡಿಸಿ ಬೆಂಗಳೂರು ವೈದ್ಯರು ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾರೆ.
ಬೆಂಗಳೂರು: ಜನರ ಜೀವ ಉಳಿಸಲು ವೈದ್ಯ ಲೋಕದಲ್ಲಿ ಒಂದಲ್ಲ ಒಂದು ಹೊಸ ಪ್ರಯೋಗ ನಡೆಯುತ್ತಲೇ ಇರುತ್ತದೆ. ಸದ್ಯ ಬೆಂಗಳೂರು ವೈದ್ಯರ ಸಾಧನೆಗೆ ಎಲ್ಲರೂ ಶಹಬಾಷ್ ಹೇಳುತ್ತಿದ್ದಾರೆ. ಜೀವ ಕೈಚೆಲ್ಲಿದ್ದ ವ್ಯಕ್ತಿಗೆ ಕೃತಕ ಹೃದಯವನ್ನು ಅಳವಡಿಸಿ ಹೊಸ ಜೀವನವನ್ನು ವೈದ್ಯರು ಕಟ್ಟಿಕೊಟ್ಟಿದ್ದಾರೆ. ಈ ವ್ಯಕ್ತಿಗೆ ಹೃದಯವು ಎದೆಯೊಳಗಿಲ್ಲ, ಬದಲಿಗೆ ಬ್ಯಾಗ್‌ನಲ್ಲಿರುವ ಎಲೆಕ್ಟ್ರಿಕ್ ಡಬ್ಬದಲ್ಲಿದೆ. ದುರ್ಬಲ ಹೃದಯ ತೆಗೆದು ಕೃತಕ ಹೃದಯ (artificial heart) ಅಳವಡಿಕೆ ಮಾಡಲಾಗಿದೆ. ಈ ಹೃದಯವು ದೇಹದೊಳಗೆ ಇರವುದಿಲ್ಲ. ಬದಲಾಗಿ ಬ್ಯಾಗ್‌ನಲ್ಲಿಟ್ಟುಕೊಂಡು (artificial heart transplant) ಸಾಗಬೇಕಿದೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ಮೂಲದ ವ್ಯಕ್ತಿಗೆ ಹೃದಯಾಘಾತದಿಂದ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರು. ಹೃದಯ ರೋಗ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಕೃತಕ ಹೃದಯ ಅಳವಡಿಕೆ ಮಾಡಿ ವೈದ್ಯರು ಮರು ಜನ್ಮ ನೀಡಿದ್ದಾರೆ. ಇದೇ ಮೊದಲ ಬಾರಿಗೆ ರಾಜಧಾನಿಯ ಖಾಸಗಿ ಆಸ್ಪತ್ರೆಯ ವೈದ್ಯರು ಕೃತಕ ಹೃದಯ ಅಳವಡಿಕೆ ಮಾಡಿದ್ದಾರೆ. ಇದು ರಾಜ್ಯದ ಮೊದಲ 3rd ಜನೆರೇಶನ್ ಎಲ್ ಬಿ ಯಶಸ್ವಿ ಕೃತಕ ಹೃದಯ ಕಸಿ ಚಿಕಿತ್ಸೆ ಆಗಿದೆ.
ದುರ್ಬಲವಾಗಿದ್ದ ಹೃದಯವನ್ನು ಬದಲಿಸಿ ಕೃತಕ ಹೃದಯವನ್ನು ವೈದ್ಯರು ಅಳವಡಿಕೆ ಮಾಡಿದ್ದಾರೆ. ಅಂದಹಾಗೇ ಈ ಕೃತಕ ಮಷಿನ್ ಬ್ಲೆಡ್ ಪಂಪ್ ಮಾಡುತ್ತದೆ. ಬ್ಯಾಗ್‍ನಲ್ಲಿರುವ ಬ್ಯಾಟರಿಗಳು, ಎಲೆಕ್ಟ್ರಿಕ್ ಮೋಟರ್ ಮತ್ತು ಟ್ಯೂಬ್‍ಗಳ ಮೂಲಕ ಗಾಳಿಯನ್ನು ಪಂಪ್ ಮಾಡುತ್ತದೆ. ಅದು ಕೃತಕ ಹೃದಯದ ಕೋಣೆಗಳಿಗೆ ಶಕ್ತಿ ನೀಡುತ್ತದೆ. ಈ ಮೂಲಕ ದೇಹದಲ್ಲೆಲ್ಲಾ ರಕ್ತ ಸಂಚಾರಗೊಳ್ಳುತ್ತದೆ. ಹೀಗಾಗಿ ಹೃದಯ ಇಲ್ಲದೆಯೂ ಕೃತಕ ಹೃದಯದ ಮೂಲಕ ಜೀವನ ಪೂರ್ತಿ ಬದುಕು ಸಾಗಿಸುವ ಶಕ್ತಿ ನೀಡಲಾಗಿದೆ.
ಇನ್ನು ಈ ಚಿಕಿತ್ಸೆಗೆ 1 ಕೋಟಿ 10 ಲಕ್ಷ ರೂ. ಖರ್ಚು ಆಗಿದೆ. ರಾಜ್ಯದಲ್ಲಿಯೇ ಮೊದಲ 3rd ಜನರೇಶನ್ ಕೃತಕ ಹೃದಯ ಅಳವಡಿಕೆ ಮಾಡಿರುವ ಖ್ಯಾತಿಯು ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ.ಅಶ್ವಿನಿ ಕುಮಾರ್ ಅವರಿಗೆ ಸಲ್ಲುತ್ತದೆ.