ಕಾರವಾರ: ಗ್ರಾಮೀಣ ಭಾಗದಲ್ಲಿ ಬಿಜೆಪಿ ಪಕ್ಷ ಸಂಘಟನೆಯ ಕುರಿತು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಕಾರ್ಯ ಪ್ರವೃತ್ತರಾಗಿದ್ದು ಸೋಮವಾರ ತಾಲೂಕಿನ ಅಮದಳ್ಳಿಯಲ್ಲಿ ಈ ಕುರಿತು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.
ಅಮದಳ್ಳಿಯ ಬಿಣಗೇಕರ್ ಅವರ ನಿವಾಸದಲ್ಲಿ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ನಡೆಸಿದ ಅವರು ಮಾತನಾಡಿ ಈಗಾಗಲೇ ದೇಶದಲ್ಲಿ ಬಿಜೆಪಿ ಸಂಘಟನೆ ಅತಿ ಎತ್ತರಕ್ಕೆ ಬೆಳೆಯಲು ಮುಖ್ಯ ಕಾರಣ ಬಿಜೆಪಿಯ ಕಾರ್ಯಕರ್ತರಾಗಿದ್ದಾರೆ. ಅವರ ಈ ಅಮೂಲ್ಯ ಪರಿಶ್ರಮದಿಂದ ಇದು ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಹೀಗಾಗಿ ನಮ್ಮ ಪಕ್ಷವನ್ನು ಇನ್ನೂ ಹೆಚ್ಚಿಗೆ ಸಂಘಟನೆ ಮಾಡುವುದು ಮುಖ್ಯವಾಗಿದೆ ಎಂದರು.
ಸಭೆಯಲ್ಲಿ ಅಮದಳ್ಳಿ ಹಾಗೂ ಮುದಗಾ ಭಾಗದ ಬಿಜೆಪಿ ಕಾರ್ಯಕರ್ತರು ಗಣಪತಿ ಉಳ್ವೇಕರ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಡಾ. ನಿತೀನ್ ಪಿಕಳೆ, ಅಮದಳ್ಳಿ ಗ್ರಾಪಂ ಅಧ್ಯಕ್ಷೆ ಆಶಾ ನಾಯ್ಕ, ಉಪಾಧ್ಯಕ್ಷ ರವಿ ದುರ್ಗೇಕರ್, ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಗುನಗಿ, ಗ್ರಾಮ ಪಂಚಾಯತ ಸದಸ್ಯ ರಾಜೇಶ್ ಮಡಿವಾಳ, ಬಿಜೆಪಿ ಕಾರ್ಯಕರ್ತ ಸತೀಶ ತಳೇಕರ್, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಉದಯ ನಾಯ್ಕ ಮುಂತಾದವರು ಇದ್ದರು.